Cnewstv.in / 19.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಈ ದೇಶದ ಮೂಲ ಶಕ್ತಿ ನಮ್ಮ ಯುವಜನತೆಯಾಗಿದ್ದು, ದೇಶವನ್ನು ಬದಲಾಯಿಸುವ ಶಕ್ತಿ ಅವರಿಗಿದೆ : ಸಚಿವ ಕೆ.ಎಸ್. ಈಶ್ವರಪ್ಪ.
ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಈ ದೇಶದ ಮೂಲ ಶಕ್ತಿ ನಮ್ಮ ಯುವಜನತೆಯಾಗಿದ್ದು, ದೇಶವನ್ನು ಬದಲಾಯಿಸುವ ಶಕ್ತಿ ಅವರಿಗಿದೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಇಂದು ಏಕಕಾಲದಲ್ಲಿ ರಾಷ್ಟ್ರಾದ್ಯಂತ ನೆರೆಹೊರೆ ಯುವ ಸಂಸತ್ ಕಾರ್ಯಕ್ರಮ ಆಯೋಜಿಸಿ ಉತ್ತಮ ದೇಶ ಕಟ್ಟಲು ಯುವಜನತೆಗೆ ಕರೆ ಕೊಟ್ಟಿದ್ದಾರೆ. ಹಾಗೂ ವಿಶ್ವದಲ್ಲಿ ಇಂದು ಭಾರತ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾರೆ ಎಂದರು.
ನಮ್ಮಲ್ಲಿ ಜಾತಿ ಬೇಧವಿರಬಾರದು. ನಾವೆಲ್ಲ ಒಂದೇ. ಎಲ್ಲರ ಹೃದಯದಲ್ಲಿ ಭಾರತಾಂಬೆ ನೆಲೆಸಿದ್ದಾಳೆ. ದೇಶದ ಒಳಗೆ, ಹೊರಗೆ ಇಂದು ಉಗ್ರಗಾಮಿಗಳು ಕೋಮು ಭಾವನೆ ಬಿತ್ತುತ್ತಿದ್ದು ಇದಕ್ಕೆ ಯುವಜನರಾದ ನೀವು ತಕ್ಕ ಉತ್ತರ ನೀಡಬೇಕು ಹಾಗೂ ಪೋಷಕರು, ಅಧ್ಯಾಪಕರ ಆಸೆಯಂತೆ ಒಳ್ಳೆಯ ವಿದ್ಯಾವಂತರಾಗಿ, ರಾಷ್ಟ್ರಭಕ್ತಿ ಬೆಳೆಸಿಕೊಂಡು ದೇಶಕ್ಕೆ ಉತ್ತಮ ಆಸ್ತಿಯಾಗಬೇಕೆಂದು ಆಶಿಸಿದರು.
ನೆಹರು ಯುವ ಸಂಘಟನೆಯ ರಾಜ್ಯ ನಿರ್ದೇಶಕ ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಧಾನಮಂತ್ರಿಯವರ ಸೂಚನೆಯಂತೆ ಇಂದು ದೇಶದ 748 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮ ಆಯೋಜಿಸಿದ್ದು, ಯುವಜನತೆ ಮೂಲಕ ಎಲ್ಲೆಡೆ ಸ್ವಚ್ಚತೆ, ಆರೋಗ್ಯ, ಕ್ರೀಡೆ, ಸಂಸ್ಕøತಿ ಇತ್ಯಾದಿ ಬಗ್ಗೆ ತಿಳುವಳಿಕೆ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರಸ್ತುತ ರಾಜ್ಯದಲ್ಲಿ 5 ಲಕ್ಷ ಎನ್‍ಎಸ್‍ಎಸ್ ಸ್ವಯಂ ಸೇವಕರಿದ್ದು ನಮ್ಮ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಈ ಸಂಖ್ಯೆಯನ್ನು 10 ಲಕ್ಷಕ್ಕೆ ಏರಿಸುವ ಗುರಿ ಹೊಂದಿದ್ದಾರೆ. ಮಹಿಳಾ ಸಬಲೀಕರಣಕ್ಕಾಗಿ ಸುಮಾರು 3 ಲಕ್ಷ ಮಹಿಳೆಯರಿಗೆ ಓಬವ್ವ ಸ್ವಂರಕ್ಷಣಾ ತರಬೇತಿ ನೀಡಲಾಗುತ್ತಿದೆ. ಅವಕಾಶವಂಚಿತ ಯುವಜನತೆಗೆ ಪೈಲಟ್ ತರಬೇತಿ ನೀಡುವ ಯೋಜನೆಯನ್ನು ಸಹ ಸಚಿವರು ಹಾಕಿಕೊಂಡಿದ್ದಾರೆ ಎಂದರು.
ಇದನ್ನು ಒದಿ : https://cnewstv.in/?p=8552
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments