Cnewstv.in / 19.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಜಿಲ್ಲಾ ಮಟ್ಟದ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮ : ಯುವ ಜನತೆ ನಮ್ಮ ದೇಶದ ಶಕ್ತಿ ಮತ್ತು ಭವಿಷ್ಯ – ಡಾ.ನಾರಾಯಣಗೌಡ.
ಶಿವಮೊಗ್ಗ : ಯುವಜನತೆಯೇ ನಮ್ಮ ದೇಶದ ಶಕ್ತಿ ಮತ್ತು ಭವಿಷ್ಯ. ಯುವಜನತೆ ಮನಸ್ಸು ಮಾಡಿದರೆ ದೇಶದ ಭವಿಷ್ಯವನ್ನೇ ಬದಲಾಯಿಸಬಹುದು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣ ಗೌಡ ಹೇಳಿದರು.
ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಕುವೆಂಪು ವಿವಿ ಹಾಗೂ ಇನ್ನೋವೇಟಿವ್ ಯೂತ್ ಕ್ಲಬ್ ಶಿವಮೊಗ್ಗ ಇವರ ಸಹಯೋಗದಲ್ಲಿ ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವಜನತೆ ಆತ್ಮಪೂರ್ವಕವಾಗಿ ಶಕ್ತಿಯನ್ನು ಒಗ್ಗೂಡಿಸಿದಲ್ಲಿ ಉತ್ತಮ ಅಭಿವೃದ್ದಿ ಸಾಧ್ಯವಾಗುತ್ತದೆ. ತಮ್ಮ ಕುಟುಂಬದಿಂದ ಆರಂಭವಾಗಿ ಅಕ್ಕಪಕ್ಕ, ತಮ್ಮ ಗ್ರಾಮ, ತಾಲ್ಲೂಕು, ಜಿಲ್ಲೆ ಹೀಗೆ ದೇಶಾದ್ಯಂತ ತಮ್ಮ ಶಕ್ತಿಯನ್ನು ವಿಸ್ತರಿಸಬೇಕು. ಹೇಗೆ ತಾವು ಇಂಜಿನಿಯರ್, ಡಾಕ್ಟರ್ ಇತರೆ ಆಗಬೇಕೆಂದುಕೊಂಡು ಸಾಧನೆ ಮಾಡುತ್ತೀರೋ ಹಾಗೇಯೇ ದೇಶೋದ್ದಾರದ ಸಾಧನೆ ಮಾಡಬೇಕು.
ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಯುವಜನತೆ ಬಗ್ಗೆ ಉನ್ನತವಾದ ಕನಸು ಕಂಡಿದ್ದಾರೆ. ಅವರ ಈ ಕನಸು ಮತ್ತು ವಿಶ್ವಾಸಕ್ಕೆ ನೀವು ಶಕ್ತಿ ತುಂಬಿ ಸಾಕಾರಗೊಳಿಸಬೇಕು. ಮನೆಯಲ್ಲಿ ಯಾರಾದರೂ ಕುಡಿತ ಇನ್ನಿತರೆ ದುಶ್ಚಟಗಳನ್ನು ಹೊಂದಿದ್ದರೆ ಅವರ ಮನವೊಲಿಸಿ ಬಿಡಿಸುವ, ತಮ್ಮ ಸುತ್ತಮುತ್ತ ಸ್ವಚ್ಚತೆ ಕಾಪಾಡುವ ಕೆಲಸ ಮಾಡಬೇಕು. ಹೆಣ್ಣುಮಕ್ಕಳಿಗೆ ಮನವೊಲಿಸುವ ಶಕ್ತಿ ಹೆಚ್ಚಿದ್ದು ಈ ನಿಟ್ಟಿನಲ್ಲಿ ಒಳ್ಳೆಯ ಬೆಳವಣಿಗೆಗೆ ಕಾರಣರಾಗಬೇಕು ಎಂದ ಅವರು ಯುವಜನತೆ ತಮ್ಮ ಶ್ರಮದಿಂದ ರಾಜ್ಯವನ್ನು ಒಂದನೇ ಸ್ಥಾನಕ್ಕೆ ತರಬೇಕೆಂದರು.
ಇದನ್ನು ಒದಿ : https://cnewstv.in/?p=8549
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments