Breaking News

ಸಂಸ್ಕಾರವಂತ ರಾಷ್ಟ್ರಪ್ರೇಮಿಗಳನ್ನು ನಿರ್ಮಿಸಬೇಕಿದೆ : ರಾಧಾಕೃಷ್ಣ

Cnewstv.in / 18.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಸಂಸ್ಕಾರವಂತ ರಾಷ್ಟ್ರಪ್ರೇಮಿಗಳನ್ನು ನಿರ್ಮಿಸಬೇಕಿದೆ : ರಾಧಾಕೃಷ್ಣ

ಶಿವಮೊಗ್ಗ: ಭಾರತ ಹಿಂದೂ ರಾಷ್ಟ್ರವಾಗಬೇಕೆಂಬ ಪರಿಕಲ್ಪನೆ ಎಲ್ಲರ ಭಾವನೆಯಾಗಬೇಕು. ಈ ದಿಸೆಯಲ್ಲಿ ಸಂಸ್ಕಾರವಂತ ರಾಷ್ಟ್ರಪ್ರೇಮಿಗಳನ್ನು ನಿರ್ಮಿಸಬೇಕಿದೆ ಎಂದು ಆರ್.ಎಸ್.ಎಸ್. ಪ್ರಚಾರ ವಿಭಾಗದ ರಾಧಾಕೃಷ್ಣ ಹೇಳಿದರು.

ಇಂದು ಮಧುಕೃಪಾದ ಕಚೇರಿಯಲ್ಲಿ ಪತ್ರಿಕಾ ಸಂಪಾದಕರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ಸಶಕ್ತ ಹಿಂದೂ ರಾಷ್ಟ್ರವಾಗಿ ಬದಲಾಗಬೇಕೆಂಬುದು ಎಲ್ಲರ ಅಪೇಕ್ಷೆಯಾಗಿದೆ. ಸಮೃದ್ಧ ಭಾರತ ಎಲ್ಲಾ ಭಾರತೀಯರ ಕನಸಾಗಿದೆ. ಆದರೆ, ದೇಶ ಭಕ್ತ ಹಿಂದೂಗಳ ಕೊರತೆ ಇದೆ ಎಂದರು.

ನಮ್ಮ ಜಾತ್ಯತೀತ ರಾಷ್ಟ್ರದ ಪರಿಕಲ್ಪನೆಯಲ್ಲಿ ವಿವಿಧೆತೆಯಲ್ಲಿ ಏಕತೆ ಹೊಂದಿದೆ. ಸಂಘಟನೆ, ಸಚ್ಛಾರಿತ್ರ್ಯ, ಧರ್ಮ ಪಾಲನೆ ಮೂಲಕ ಆರ್.ಎಸ್.ಎಸ್. ಸಶಕ್ತ ಪ್ರಜೆಗಳ ನಿರ್ಮಾಣ ನಮ್ಮ ಗುರಿಯಾಗಿದೆ ಎಂದರು.

ಹಿಂದೂಗಳಲ್ಲಿ ಸಂಸ್ಕಾರ ಮುಖ್ಯ ಎಂದು ಪ್ರತಿಪಾದಿಸಿದ ಅವರು, ವೈಯಕ್ತಿಕ ಬದುಕು ಹಾಗೂ ಸಮಾಜದ ಮೇಲೆ ಸಂಸ್ಕಾರ ಬಹಳಷ್ಟು ಪರಿಣಾಮ ಬೀರಲಿದೆ ಎಂದರು.
ಸಂವಾದದಲ್ಲಿ ಪ್ರಮುಖರಾದ ಬಿ.ಎ. ರಂಗನಾಥ್ ಉಪಸ್ಥಿತರಿದ್ದರು.

ಇದನ್ನು ಒದಿ : https://cnewstv.in/?p=8525

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*