Breaking News

ಗೂಂಡ ವರ್ತನೆ ಹಾಗೂ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಶಾಸಕರನ್ನು ಅವರ ಸ್ಥಾನದಿಂದ ರದ್ದುಗೊಳಿಸಬೇಕು : ರಾಷ್ಟ್ರಭಕ್ತರ ಬಳಗ

Cnewstv.in / 18.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಗೂಂಡ ವರ್ತನೆ ಹಾಗೂ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಶಾಸಕರನ್ನು ಅವರ ಸ್ಥಾನದಿಂದ ರದ್ದುಗೊಳಿಸಬೇಕು : ರಾಷ್ಟ್ರಭಕ್ತರ ಬಳಗ.

ಶಿವಮೊಗ್ಗ : ಸಚಿವ ಕೆ. ಎಸ್ ಈಶ್ವರಪ್ಪನವರನ್ನು ದೇಶದ್ರೋಹಿ ಎಂದು ಸುಳ್ಳು ಆಪಾದನ ಮಾಡಿ ಗೂಂಡ ವರ್ತನೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಸದಸ್ಯರು ಹಾಗೂ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಶಾಸಕರನ್ನು ಅವರ ಸ್ಥಾನದಿಂದ ರದ್ದುಗೊಳಿಸಬೇಕೆಂಬ ರಾಷ್ಟ್ರಭಕ್ತರ ಬಳಗದ ವತಿಯಿಂದ ಅಗ್ರಹಿಸಲಾಯಿತು.

ಶಿವಮೊಗ್ಗದ ಕಾಲೇಜಿನ ಮುಂಭಾಗದಲ್ಲಿ ಯಾವುದೇ ಬಾವುಟವಿಲ್ಲದೆ ಖಾಲಿ ನಿಂತಿದ, ಧ್ವಜಸ್ತಂಭ ಏರಿ ಕೇಸರಿ ಧ್ವಜ ಹಾರಿಸಿದ ಹುಡುಗರು ಹಿಜಾಬ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ವಿಷಯವನ್ನು ಸುಳ್ಳು ಸುದ್ದಿಯನ್ನಾಗಿ ತಿರುಚಿ, ವಿಧ್ಯಾರ್ಥಿಗಳು ರಾಷ್ಟ್ರಧ್ವಜವನ್ನು ಕೆಳಗಿಳಿಸಿ
ಕೇಸರಿ ಧ್ವಜ ಹಾರಿಸಿದರೆಂಬ ವಾಸ್ತವಕ್ಕೆ ವ್ಯತಿರಿಕ್ತವಾದ ವಿಷಯ
ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ನಡುವೆ ಹಿಂದು ವಿರೋಧಿ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ. ಕೆ ಶಿವಕುಮಾರ್ ಶಿವಮೊಗ್ಗದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನವಾಗಿದೆ ಎಂದು ಇಲ್ಲದ ಸಲ್ಲದ ವಿವಾದ ಹುಟ್ಟುಹಾಕಿದರು.

ತದನಂತರದಲ್ಲಿ ಮಾಧ್ಯವದವರು K S ಈಶ್ವರಪ್ಪನವರನ್ನು ಕೇಳಿದಾಗ, ಖಾಲಿ ಧ್ವಜಸ್ತಂಭ ಏರಿ ಭಗವಾಧ್ವಜ ಹಾರಿಸಿದರೇ ಹೊರತು ಯಾವುದೇ ರಾಷ್ಟ್ರಧ್ವಜ ಇಳಿಸಿ ಅವಮಾನ ಮಾಡಿಲ್ಲವೆಂದು, ರಾಷ್ಟ್ರಧ್ವಜದ ಕುರಿತು ನಮಗೆ ಗೌರವವಿದೆ ಎಂದು ಸ್ಪಷ್ಟ ಪಡಿಸಿದರು ಆದರೂ ಕಾಂಗ್ರೆಸಿಗರು
ಈಶ್ವರಪ್ಪನವರು ರಾಷ್ಟ್ರ ಧ್ವಜವನ್ನು ಅಗೌರವಿಸಿದರೆಂದು ಹೇಳಿ ದೇಶದ್ರೋಹಿ ಎಂದು ಪದೇ ಪದೇ ಕರೆದು
ಅವಮಾನಿಸುತ್ತಿದ್ದಾರೆ.

ಸದನದಲ್ಲಿ ಇದೇ ವಿಷಯವಾಗಿ ಸನ್ಮಾನ ಈಶ್ವರಪ್ಪನವರು ರಾಷ್ಟ್ರಧ್ವಜಕ್ಕೆ, ಅವಮಾನಿಸಿದರೆಂದು ಸುಳ್ಳು, ಅಪಾದನೆ ಮಾಡುತ್ತಾ ಯಾವುದೇ ಕಲಾಪ ನಡೆಯಲು ಬಿಡದ ಧರಣಿ
ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ವಿಧಾನ ಸಭೆಯಲ್ಲಿ ರಾಷ್ಟ್ರಧ್ವಜಗಳನ್ನು ಬೇಕಾಬಿಟ್ಟಿ ಹಿಡಿದು ಪ್ರದರ್ಶಿಸಿ
ರಾಷ್ಟ್ರ ಧ್ವಜದ ಘನತೆಗೆ ಅಪಚಾರವೆಸಗಿದ್ದಾರೆ. ಈ ಗಂಭೀರವಾದ ವಿಷಯವನ್ನು ತಾವು ಘನವು
ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟು ಈ ದುರ್ನಡತೆಗೆ ಕಾರಣರಾದ ಕಾಂಗ್ರೆಸ್ ಪಕ್ಷದ ನಾಯಕರಾದ ಡಿ ಕೆ ಶಿವಕುಮಾರ್ ಹಾಗು ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಶಾಸಕರನ್ನು ಅವರ ಸ್ಥಾನದಿಂದ ರದ್ದುಗೊಳಿಸಬೇಕೆಂಬ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಇದನ್ನು ಒದಿ : https://cnewstv.in/?p=8519

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*