Breaking News

ಬಿಜೆಪಿಯವರು ಸದಾ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ – ಎಚ್ ಎಸ್ ಸುಂದರೇಶ್

Cnewstv.in / 17.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಬಿಜೆಪಿಯವರು ಸದಾ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಶಿವಮೊಗ್ಗ : ಬಿಜೆಪಿಯವರು ಸದಾ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬ್ರಿಟೀಷರ ಆಡಳಿತಕ್ಕೂ, ಬಿಜೆಪಿ ಆಡಳಿತಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದು ಶಿವಮೊಗ್ಗ‌ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಎಸ್ ಸುಂದರೇಶ್ ಹೇಳಿದ್ದಾರೆ.

ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಕೆಎಸ್ ಈಶ್ವರಪ್ಪನವರನ್ನು ಸಂಪುಟದಿಂದ ಈ ಕೂಡಲೇ ಕೈಬಿಡಬೇಕು. ಅವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣವನ್ನು ದಾಖಲಿಸಬೇಕು ಎಂದು ಆಗ್ರಹಿಸಿದರು.

ಜನಸಾಮಾನ್ಯರಲ್ಲಿ ಕೋಮುಭಾವನೆಯನ್ನು ಬಿತ್ತುವುದು ಸಮಾಜದಲ್ಲಿ ಶಾಂತಿ ಹಾಳು ಮಾಡುವುದೇ ಇವರ ಪ್ರಮುಖ ಅಜೆಂಡಾವಾಗಿದೆ.‌ ಈಶ್ವರಪ್ಪನವರು ನಮ್ಮದು ದೇಶಭಕ್ತರ ಪಕ್ಷ ಎಂದು ಹೇಳುತ್ತಾರೆ ಆದರೆ ಇವರು ನಕಲಿ ದೇಶಭಕ್ತರು.

ಸ್ವತಂತ್ರ ಹೋರಾಟಕ್ಕಾಗಿ ಇವರ ಪಕ್ಷದಿಂದ ಒಂದು ನಾಯಿಯು ಸತ್ತಿಲ್ಲ. ಕೇವಲ ಪ್ರಚಾರಕ್ಕಾಗಿ ಬಾಯಿಗೆ ಬಂದಂತೆ ಈಶ್ವರಪ್ಪನವರು ಮಾತನಾಡುತ್ತಾರೆ. ರಾಜ್ಯ ಮತ್ತು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುವುದನ್ನು ಬಿಟ್ಟು ಆರ್ ಎಸ್ ಎಸ್ ಒಲೈಸುವ ನಿಟ್ಟಿನಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

ಇದನ್ನು ಒದಿ : https://cnewstv.in/?p=8496

 

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*