Cnewstv.in /15.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಹಕಾರಿ ಸಂಘ ಸಂಸ್ಥೆಗಳ ಚುನಾವಣೆಗೆ ಪ್ರಕ್ರಿಯೆ ಆರಂಭಿಸುವಂತೆ ಸೂಚನೆ
ಶಿವಮೊಗ್ಗ : ಕರ್ನಾಟಕ ಸಂಘಟನೆಗಳ ನೋಂದಣಿ ಕಾಯ್ದೆ 1960ರಡಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ಸಂಘ ಸಂಸ್ಥೆಗಳ/ಸ. ಬ್ಯಾಂಕ್‍ಗಳ ಮತ್ತು ಸೌಹಾರ್ದ ಸಹಕಾರಿಗಳ ಸಾರ್ವತ್ರಿಕ ಚುನಾವಣೆ/ಉಪ ಚುನಾವಣೆಗಳನ್ನು ಹಾಗೂ ಅಧ್ಯಕ್ಷರ/ಉಪಾಧ್ಯಕ್ಷರ ಚುನಾವಣೆಗಳನ್ನು ಕೋವಿಡ್-19 ರೋಗದ ಹರಡುವಿಕೆ ಹೆಚ್ಚುತ್ತಿರುವ ಕಾರಣದಿಂದ ಮಾರ್ಚ್-2022 ವರೆಗೆ ಅಥವಾ ಮುಂದಿನ ಆದೇಶದವರೆಗೆ ಮುಂದೂಡುವಂತೆ ಸುತ್ತೋಲೆ ಹೊರಡಿಸಲಾಗಿತ್ತು.
ಪ್ರಸ್ತುತ ರೋಗವು ಗಣನೀಯವಾಗಿ ಇಳಿಕೆಯಾಗಿರುವುದರಿಂದ ರಾಜ್ಯ ಸರ್ಕಾರವು ಹಲವಾರು ನಿರ್ಬಂಧಗಳಿಗೆ ವಿನಾಯಿತಿ ನೀಡಿದ್ದು, ಸಂಘ/ಸಂಸ್ಥೆಗಳ ಹಾಗೂ ಬ್ಯಾಂಕ್‍ಗಳ ಹಿತದೃಷ್ಠಿಯಿಂದ ರಾಜ್ಯದ ಎಲ್ಲಾ ಸಹಕಾರ ಸಂಘಗಳು/ಬ್ಯಾಂಕುಗಳು ಮತ್ತು ಸೌಹಾರ್ದ ಸಹಕಾರಿಗಳ ಸಾಮಾನ್ಯ ಚುನಾವಣೆ ಮತ್ತು ಆಡಳಿತ ಮಂಡಳಿಯ ಚುಣಾವಣೆಯಲ್ಲಿ ಖಾಲಿಬಿದ್ದ ನಿರ್ದೇಶಕರ ಸ್ಥಾನಗಳ ಚುನಾವಣೆಯನ್ನು ನಡೆಸಲು ವಿಧಿಸಿದ್ದ ನಿಬರ್ಂಧವನ್ನು ತೆರವುಗೊಳಿಸಿ, ಚುನಾವಣೆಗಳನ್ನು ಮುಂದೂಡವ ಪೂರ್ವದಲ್ಲಿ ಯಾವ ಹಂತದಲ್ಲಿ ನಿಲ್ಲಿಸಲಾಗಿತ್ತೋ ಆ ಹಂತದಿಂದ ಪ್ರಾರಂಭಿಸಿ, ಕೋವಿಡ್-19ರ ಮಾರ್ಗಸೂಚಿಗಳನ್ನು ಅನುಸರಿಸಿ ಚುಣಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತಿಳಿಸಿದೆ.
ಆದ್ದರಿಂದ ಶಿವಮೊಗ್ಗ ಜಿಲ್ಲೆಯ ವ್ಯಾಫ್ತಿಯ ಚುನಾವಣೆಗೆ ಬಾಕಿ ಇರುವ ಎಲ್ಲಾ ಸಹಕಾರ ಸಂಘಗಳು/ ಬ್ಯಾಂಕುಗಳು ಹಾಗೂ ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಚುನಾವಣೆಗೆ ಅಗತ್ಯ ಕ್ರಮ ವಹಿಸುವಂತೆ ಸಂಘಗಳ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಇದನ್ನು ಒದಿ : https://cnewstv.in/?p=8441
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv