Cnewstv.in /15.02.2022 / ಮುಂಬೈ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ತಾಯಿ ಕೊಲೆಗೆ ಕಾರಣ ಅಯ್ತು ಮಗಳ ವಾಟ್ಸ್‌ಆ್ಯಪ್ ಸ್ಟೇಟಸ್..
ಮುಂಬೈ: ಮಗಳು ವಾಟ್ಸ್‌ಆ್ಯಪ್‌ನಲ್ಲಿ ಹಾಕಿದ್ದ ಸ್ಟೇಟಸ್‌ನಿಂದ ತಾಯಿಯ ಕೊಲೆಯಾಗಿರುವ ಘಟನೆ ಮುಂಬೈ ನಲ್ಲಿ ನಡೆದಿದೆ.
ಪ್ರೀತಿ ಪ್ರಸಾದ್ ಎಂಬ 20 ವರ್ಷದ ಕಾಲೇಜಿಗೆ ಹೋಗುವ ಯುವತಿ ತನ್ನ ಮೊಬೈಲ್ ಫೋನ್‌ನಲ್ಲಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದಳು. ಅದು ಯಾರಿಗೋ ಬೈಯುವಂತಿತ್ತು.ಅದು ನೆರೆ ಮನೆಯಲ್ಲಿ ವಾಸಿಸುವ ತನ್ನ 17 ವರ್ಷದ ಸ್ನೇಹಿತೆಗೆ ಬೈಯುವುದಕ್ಕೇ ಈ ಸ್ಟೇಟಸ್ ಹಾಕಿದ್ದಾಳೆ ಎಂದು ತಿಳಿದುಕೊಂಡು ಅದರ ಬಗ್ಗೆ ತನ್ನ ತಾಯಿಯ ಬಳಿ ಬಂದು ದೂರು ಹೇಳಿದ್ದಾಳೆ.
ಫೆ. 10ರಂದು ಆ ಯುವತಿಯ ಕುಟುಂಬವು, ಸ್ಟೇಟಸ್ ಹಾಕಿದ್ದ ಯುವತಿಯ ತಾಯಿ ಲೀಲಾವತಿ ದೇವಿ (48) ಬಳಿ ಬಂದು ಜಗಳವಾಡಿದ್ದಾರೆ. ಆ ಸಂದರ್ಭದಲ್ಲಿ ವಾದ-ವಿವಾದ ನಡೆದು, ಲೀಲಾವತಿ ದೇವಿ ಪ್ರಸಾದ್ ಅವರ ಪಕ್ಕೆಲುಬುಗಳಿಗೆ ಆಂತರಿಕ ಗಾಯಗಳಾಗಿವೆ. ಆಕೆಯನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅದರೂ ಕೂಡ ಫೆ.11 ರ ರಾತ್ರಿ ಚಿಕಿತ್ಸೆಯಲ್ಲಿ ಸಾವನ್ನಪ್ಪಿದಳು.
ಯುವತಿಯ ದೂರಿನ ಆಧಾರದ ಮೇಲೆ, ಬೋಯ್ಸರ್ ಪೊಲೀಸರು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 304 ರ ಅಡಿಯಲ್ಲಿ ಅಪ್ರಾಪ್ತ ಬಾಲಕಿ, ಆಕೆಯ ತಾಯಿ, ಸಹೋದರ ಮತ್ತು ಸಹೋದರಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನು ಒದಿ : https://cnewstv.in/?p=8434
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv