Breaking News

ಜಗತ್ತಿನ ಶ್ರೇಷ್ಠ ವಿಚಾರಗಳು ಸನಾತನ ಧರ್ಮದಲ್ಲಿದೆ : ಬಿ. ವೈ. ರಾಘವೇಂದ್ರ.

Cnewstv.in / 14.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಜಗತ್ತಿನ ಶ್ರೇಷ್ಠ ವಿಚಾರಗಳು ಸನಾತನ ಧರ್ಮದಲ್ಲಿದೆ : ಬಿ. ವೈ. ರಾಘವೇಂದ್ರ.

ಚೋರಡಿ : ಮಠಗಳು , ದೇವಾಲಯಗಳು ಜ್ಞಾನವನ್ನು ಪಸರಿಸುವ ಕೆಲಸವನ್ನು ಸದಾ ಮಾಡುತ್ತಾ ಬಂದಿದೆ, ಸ್ವಾಮೀಜಿಗಳು ತಮ್ಮ ಯವ್ವನವನ್ನು ಧರ್ಮದ ಕಾರ್ಯಕ್ಕೆ ಅರ್ಪಿಸಿದ್ದಾರೆ, ವೀರ ಸನ್ಯಾಸಿ ಸ್ವಾಮಿ ವಿವೇಕನಂದರು ಹೇಳಿದಂತೆ ಸಂತರು ಭವ್ಯ ಭಾರತದಲ್ಲಿ ಇರುವವರೆಗೂ ಈ ನಾಡಿಗೆ ಸಾವಿಲ್ಲ, ಜಗತ್ತಿನ ಶ್ರೇಷ್ಠ ವಿಚಾರಗಳು ಸನಾತನ ಧರ್ಮದಲ್ಲಿದೆ ಎಂದು ಸಂಸದರಾದ ಬಿ. ವೈ. ರಾಘವೇಂದ್ರ ಅವರು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ಚೋರಡಿಯಲ್ಲಿ ಶ್ರೀ ಬೇಡರಕಣ್ಣಪ್ಪ ನೂತನ ದೇವಸ್ಥಾನ ಉದ್ಘಾಟನೆ ಮತ್ತು ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಭಾಗವಹಿಸಿ ಮಾತನಾಡಿ ” ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿಯ ಕೆಲಸಗಳು ಪ್ರಾರಂಭವಾಗಿ ಉದ್ಘಾಟನೆಗೆ ಸಿದ್ದವಾಗಿದೆ, ಲಯನ್ ಸಫಾರಿಯಿಂದ – ಆನಂದಪುರದವರೆಗೆ 39 ಕಿಮೀ ಚತುಷ್ಪತ ರಸ್ತೆ ಗೆ DPR ಅನುಮೋದನೆ ದೊರೆತಿದೆ, ಶಿವಮೊಗ್ಗ ನಗರಕ್ಕೆ
ರಿಂಗ್ ರೋಡ್, ನೀರಾವರಿ ಯೋಜನೆ ರೈಲ್ವೇ ಓವರ್ ಬ್ರಿಡ್ಜ್ ಹೀಗೆ ಜನಪರ ಕೆಲಸಗಳನ್ನು ದೇವರು ಮೆಚ್ಚುವ ರೀತಿಯಲ್ಲಿ ಮಾಡುತ್ತಿದ್ದೇವೆ, ಕೊರೋನಾ ಕೇಸ್ ಗಳು ಕಡಿಮೆಯಾಗುತ್ತಿದೆ ಆದರೆ ಸಾರ್ವಜನಿಕರು ಆರೋಗ್ಯದ ಬಗ್ಗೆ ಜಾಗೃತಿ ಇರಲಿ” ಎಂದರು.

ದಿವ್ಯ ಸಾನಿಧ್ಯವನ್ನು ಬಸವ ಕೇಂದ್ರದ ಪರಮಪೂಜ್ಯ ಶ್ರೀ ಶ್ರೀ ಡಾ. ಶ್ರೀ ಬಸವ ಮರುಳ ಸಿದ್ಧ ಸ್ವಾಮೀಜಿ, ವೀರಕ್ತ ಮಠದ ಶ್ರೀಗಳಾದ ಚನ್ನಬಸವ ಸ್ವಾಮೀಜಿ, ಸ್ವಾಮೀಜಿ, ದೇವಸ್ಥಾನ ಸಮಿತಿಯ ಅಧ್ಯಕ್ಷರು ಸದಸ್ಯರು, ಗ್ರಾಮಪಂಚಾಯಿತಿಯ ಅಧ್ಯಕ್ಷರು ಸದಸ್ಯರು ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಇದನ್ನು ಒದಿ : https://cnewstv.in/?p=8425

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*