Breaking News

ಹಿರಿಯ ನಾಗರೀಕರಿಗೆ ಸಹಾಯವಾಣಿ.

Cnewstv.in / 14.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಹಿರಿಯ ನಾಗರೀಕರಿಗೆ ಸಹಾಯವಾಣಿ.

ಶಿವಮೊಗ್ಗ : ವಿಕಲಚೇತನ ಹಾಗೂ ಹಿರಿಯ ನಾಗರೀಕರ ಇಲಾಖೆ ಅಡಿಯಲ್ಲಿ ಲಲಿತಾ ಅಕಾಡೆಮಿ ಸಂಸ್ಥೆಯು ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರವನ್ನು ಸಾಗರ ರಸ್ತೆಯ ಡಿವೈಎಸ್‍ಪಿ ಕಚೇರಿಯಲ್ಲಿ ನಡೆಸುತ್ತಿದೆ.

ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರದ ಸಂಖ್ಯೆ : 1090 ಹಾಗೂ ಕಚೇರಿ ಸಂಖ್ಯೆ 08182-221188, 260424 ಆಗಿರುತ್ತದೆ. ತೊಂದರೆಯಲ್ಲಿರುವ ಹಿರಿಯರಿಗೆ ಸಾಧ್ಯವಾಗುವ ಸಕಾಲ ಬೆಂಬಲ, ಹಿರಿಯರಿಗೆ ಅಗತ್ಯವಿದ್ದಲ್ಲಿ ಉಚಿತ ಕಾನೂನಿನ ನೆರವು, ಕೌಟುಂಬಿಕ ವಿಷಯಗಳಲ್ಲಿ ರಾಜಿ ಮಾಡಿಸುವುದು, ವಿವಾದಗಳನ್ನು ಬಗೆಹರಿಸಲು ಬೇರೆ ಮಾರ್ಗೋಪಾಯಗಳನ್ನು ಸೂಚುಸುತ್ತದೆ.

ತೀರ ಅಗತ್ಯವಿದ್ದಲ್ಲಿ ಪೊಲೀಸರ ನೆರವಿನಿಂದ ಸಮಸ್ಯೆ ಪರಿಹರಿಸು ಸೂಕ್ತ ಮಾರ್ಗದರ್ಶನ/ಸಲಹೆ ಕೊಡುವುದು, ಮಾನಸಿಕ ಧೈರ್ಯ ತುಂಬುವುದು, ವೃದ್ದಾಶ್ರಮದಲ್ಲಿ ಪುನರ್ವಸತಿ ಒದಗಿಸುವುದು ಮತ್ತು ಅದರಲ್ಲಿ ದೊರೆಯುವಂತಹ ಸೌಲಭ್ಯಗಳು, ವೈದ್ಯಕೀಯ ಸಲಹೆಯಂತೆ ಸೇವೆಯನ್ನು ಒದಗಿಸಲಾಗುವುದು ಎಂದು ಹಿರಿಯ ನಾಗರೀಕರ ಸಹಾಯವಾಣಿ ಯೋಜನಾ ಸಂಯೋಜಕರು ತಿಳಿಸಿದ್ದಾರೆ.

ಇದನ್ನು ಒದಿ : https://cnewstv.in/?p=8419

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*