Cnewstv.in / 12.02.2022 / ಮುಂಬೈ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಖ್ಯಾತ ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ನಿಧನ..
ಮುಂಬೈ : ಖ್ಯಾತ ಕೈಗಾರಿಕೋದ್ಯಮಿ ಮತ್ತು ಬಜಾಜ್ ಗ್ರೂಪ್ನ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ (83) ಇಂದು ನಿಧನರಾಗಿದ್ದಾರೆ.
ನ್ಯುಮೋನಿಯಾ ಮತ್ತು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ರಾಹುಲ್ ಬಜಾಜ್ ಅವರನ್ನು ಕಳೆದ 1 ತಿಂಗಳಿನಿಂದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ದೇಶದ ಅತ್ಯಂತ ಯಶಸ್ವಿ ಕೈಗಾರಿಕೋದ್ಯಮಿಯಾಗಿದ್ದ ರಾಹುಲ್ ಬಜಾಜ್ ರವರು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಕ್ಷೇತ್ರದಲ್ಲಿ ಬಜಾಜ್ ಆಟೋ ನಿರ್ಮಿಸಿ ಪ್ರಖ್ಯಾತಿ ಪಡೆದಿದ್ದರು. ಅಷ್ಟೆ ಅಲ್ಲದೇ ರಾಹುಲ್ ಬಜಾಜ್ ರವರು ಭಾರತೀಯ ಸ್ವತಂತ್ರ ಹೋರಾಟಗಾರ ಜಮ್ನಾಲಾಲ್ ಬಜಾಜ್ ರವರ ಮೊಮ್ಮಗ.
2006 ರಿಂದ 2010 ರ ವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು. ರಾಹುಲ್ ಬಜಾಜ್ ರವರು 40 ವರ್ಷಗಳ ಕಾಲ ಬಜಾಜ್ ಗ್ರೂಪ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಎಮೆರಿಟರ್ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ರಾಹುಲ್ ಬಜಾಜ್ ರವರ ನಿಧನಕ್ಕೆ ಅನೇಕ ಉದ್ಯಮಿಗಳು, ರಾಜಕಾರಣಿಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇದನ್ನು ಒದಿ : https://cnewstv.in/?p=8391
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv