Breaking News

Anti Social Karnataka Congress : ನಲಪಾಡ್ ವಿರುದ್ಧ ಬಿಜೆಪಿ ಗರಂ ?!! ಸರಣಿ ಟ್ವೀಟ್..

Cnewstv.in / 11.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Anti Social Karnataka Congress : ನಲಪಾಡ್ ವಿರುದ್ಧ ಬಿಜೆಪಿ ಗರಂ ?!! ಸರಣಿ ಟ್ವೀಟ್..

ಬೆಂಗಳೂರು : ಮೊಹಮ್ಮದ್ ನಲಪಾಡ್ ಸದಾ ಒಂದಿಲ್ಲೊಂದು ವಿವಾದ ಅಥವಾ ಚರ್ಚೆಗಳಿಗೆ ಗುರಿಯಾಗುತ್ತಾರೆ. ಇದೀಗ ಯುವ ಕಾಂಗ್ರೆಸ್ನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಅಂತಹ ಮೊಮ್ಮದ್ ವಿರುದ್ಧ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.

ಮಹಮ್ಮದ್‌ ನಲಪಾಡ್‌ ಅವರನ್ನು ರೌಡಿ ಚಟುವಟಿಕೆಯ ಕಾರಣಕ್ಕಾಗಿ 2018 ರಲ್ಲಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲಕ್ಕೆ ಕೆಪಿಸಿಸಿ ಅಧ್ಯಕ್ಷರು ಉಚ್ಚಾಟನೆ ಮಾಡಿದ್ದರು. ಅದೇ ನಲಪಾಡ್‌ ಕೇವಲ 4 ವರ್ಷಗಳಲ್ಲಿ ಯುವ ಕಾಂಗ್ರೆಸ್‌ ಅಧ್ಯಕ್ಷರಾಗುತ್ತಾರೆ. ಎಂತಹ ವೈಚಿತ್ರ್ಯವಿದು!? ಎಂದು ಟ್ವೀಟ್ ಮಾಡಲಾಗಿದೆ.

ಯುವ ಕಾಂಗ್ರೆಸ್‌ ಅಧ್ಯಕ್ಷ ಮತ್ತು ಆತನ ಸಾಧನೆಗಳು ಎಂದು ಟ್ವೀಟ್ ಮಾಡಿ, √ IPC section 307 ( ಕೊಲೆ ಯತ್ನ) √ IPC 341 (ಸಂಯಮ ಮೀರಿದ ವರ್ತನೆ) √ IPC 506 (ಕ್ರಿಮಿನಲ್‌ ಬೆದರಿಕೆ) √ IPC 143 and 144 (ಅಕ್ರಮ ಗುಂಪುಗೂಡುವುದು) ಯುವ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಲು ಇದೇ ಅರ್ಹತೆಯೇ ಎಂದು ಪ್ರಶ್ನಿಸಲಾಗಿದೆ. ಹಾಗೂ √ IPC 146 and 147 (ಗಲಭೆ) √ IPC 326 (ಮಾರಕಾಯುಧಗಳಿಂದ ದಾಳಿ) √ IPC 504 (ಶಾಂತಿಭಂಗಕ್ಕೆ ಪ್ರಚೋದನೆ) ಇದು ಯುವ ಕಾಂಗ್ರೆಸ್ಸೋ ಅಥವಾ ರೌಡಿ ಕಾಂಗ್ರೆಸ್ಸೋ!? ಎಂದು ಟ್ವೀಟ್ ಮಾಡಲಾಗಿದೆ.

ಈ ರೀತಿಯ ವ್ಯಕ್ತಿ ಈಗ ಯುವ ಕಾಂಗ್ರೆಸ್‌ ಅಧ್ಯಕ್ಷ!!! ದೇಶಕ್ಕೆ ಕಾಂಗ್ರೆಸ್ ಯಾವ ಸಂದೇಶ ನೀಡುತ್ತಿದೆ!? #Anti Social Karnataka Congress ಎಂದು ಬಿಜೆಪಿ ಟ್ವೀಟ್ ಮಾಡಲಾಗಿದೆ. ಹಾಗೂ ಗುರುವಿಗೆ ತಕ್ಕ ಶಿಷ್ಯ ಎಂದು ಬಿಜೆಪಿ ಲೇವಡಿ ಮಾಡಿ ಕೆಪಿಸಿಸಿ ಅಧ್ಯಕ್ಷರಿಗೆ ಕೊತ್ವಾಲ್ ಗ್ಯಾಂಗ್ ಶ್ರೀರಕ್ಷೆಯಿತ್ತು. ‘ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಬಿಟ್ ಕಾಯಿನ್ ಗ್ಯಾಂಗ್ ನಂಟು’ ಎಂದು ಬಿಜೆಪಿ ಟ್ವೀಟ್ ಮಾಡಲಾಗಿದೆ.

ಇದನ್ನು ಒದಿ : https://cnewstv.in/?p=8356

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*