Breaking News

ಸಾಲ ಹಿಂತಿರುಗಿಸುವಂತೆ ಕೇಳಿದ್ದಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿ, ಚೀಲದಲ್ಲಿ ಕಟ್ಟಿ ಹೂತು ಹಾಕಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ.

Cnewstv.in / 11.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಸಾಲ ಹಿಂತಿರುಗಿಸುವಂತೆ ಕೇಳಿದ್ದಕ್ಕೆ ಸ್ನೇಹಿತನನ್ನೇ ಚೀಲದಲ್ಲಿ ಕಟ್ಟಿ ಹೂತು ಹಾಕಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ.

ಶಿವಮೊಗ್ಗ : ಕೊಟ್ಟ ಸಾಲ ಹಿಂತಿರುಗಿಸುವಂತೆ ಕೇಳಿದ್ದಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿ ಮೃತದೇಹವನ್ನು ಮೂಟೆ ಕಟ್ಟಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಹಾಗೂ 2.50 ಲಕ್ಣ ರೂಪಾಯಿ ದಂಡ ಕಟ್ಟುವಂತೆ ಕೋರ್ಟ್ ಆದೇಶ ನೀಡಿದೆ.

ಮಂಜಪ್ಪ ಜಿ ಮತ್ತು ಶ್ರೀಧರ ಇಬ್ಬರೂ ಸ್ನೆಹಿತರಾಗಿದ್ದು, ಮಂಜಪ್ಪನು ಶ್ರೀಧರನಿಗೆ 9 ಲಕ್ಷ ರೂ ಹಣವನ್ನು ಸಾಲವಾಗಿ ನೀಡಿದ್ದು ಹಿಂದಿರುಗಿ ನೀಡುವಂತೆ ಪದೇ ಪದೇ ಕೇಳಿದ್ದರಿಂದ 16/02/2014 ಎಪಿಎಂಸಿ ಬಳಿ ಆರೋಪಿ ಶ್ರೀಧರನು ಮಂಜಪ್ಪನನ್ನು ಕರೆಸಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಚೀಲದಲ್ಲಿ ಕಟ್ಟಿ ಅಲ್ಲೇ ಹೂತು ಹಾಕಿ ಸಾಕ್ಷಿ ನಾಶ ಮಾಡಿದನು.

ಈ ಬಗ್ಗೆ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ
ಗುನ್ನೆ ಸಂಖ್ಯೆ 0069/2014 ಕಲಂ 302 201 IPC ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು. ‌ಜಯರಾಜ್ ವೃತ್ತ ನೀರಿಕ್ಷಕರು ಕೋಟೆ ವೃತ್ತ ಮತ್ತು ಶ್ರೀ ಎಸ್ ಎಮ್ ಶಿವಕುಮಾರ್ ವೃತ್ತ ನಿರೀಕ್ಷಕರು ದೊಡ್ಡಪೇಟೆ ವೃತ್ತರವರ ತಂಡಗಳು ಸದರಿ ಪ್ರಕರಣ ತನಿಖೆ ಕೈಗೊಂಡು ದಿನಾಂಕ‌ 20-02-2014 ರಂದು ಆರೋಪಿಯನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.

ಆರೋಪಿಯ ವಿರುದ್ಧ ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾದೀಶರು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ ರವರು ಆರೋಪಿತನಿಗೆ ದಿನಾಂಕ 10-02-2022 ರಂದು ಜೀವಾವಧಿ ಕಾರಾವಾಸ ಶಿಕ್ಷೆ ಮತ್ತು 250000/- ರೂಪಾಯಿಗಳ ದಂಡ ವಿಧಿಸಿದ್ದಾರೆ.

ಇದನ್ನು ಒದಿ : https://cnewstv.in/?p=8349

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*