Breaking News

ಒಂದೇ ಕುಟುಂಬದ ಐವರನ್ನು ಮಾಂಸ ಕತ್ತರಿಸುವ ಮಚ್ಚಿನಿಂದ ಕೊಲೆ ಮಾಡಿದ ಮಹಿಳೆ..

Cnewstv.in / 10.02.2022 / ಮಂಡ್ಯ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಒಂದೇ ಕುಟುಂಬದ ಐವರನ್ನು ಮಾಂಸ ಕತ್ತರಿಸುವ ಮಚ್ಚಿನಿಂದ ಕೊಲೆ ಮಾಡಿದ ಮಹಿಳೆ..

ಮಂಡ್ಯ : ಮಹಿಳೆಯೊಬ್ಬಳು ಒಂದೇ ಮನೆಯ ಐವರನ್ನ ಮಾಂಸ ಕತ್ತರಿಸುವ ಮಚ್ಚಿನಿಂದ ಕೊಲೆ ಮಾಡಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕೆಎಸ್ ಅರ್ ಗ್ರಾಮದಲ್ಲಿ ನಡೆದಿದೆ. ಇಡೀ ಮಂಡ್ಯ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಈ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ಆರೋಪಿತ ಮಹಿಳೆ ಲಕ್ಷ್ಮಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಫೆ.6ರಂದು ಕೆಆರ್‌ಎಸ್‌ ಗ್ರಾಮದ ಬಜಾರ್‌ ಲೈನ್‌ನ ವಾಸಿ ಗಂಗಾರಾಮ್‌ನ ಪತ್ನಿ ಲಕ್ಷ್ಮೀ (27), ಈಕೆಯ ಮೂವರು ಮಕ್ಕಳಾದ ರಾಜ್‌(10), ಕೋಮಲ್‌(8), ಕುನಾಲ್‌(6), ಗಂಗಾರಾಮ್‌ ಅಣ್ಣನ ಮಗ ಗೋವಿಂದ (13) ಎಂಬುವರನ್ನು ಆರೋಪಿ ಲಕ್ಷ್ಮೀ ಹತ್ಯೆ ಮಾಡಿ ಪರಾರಿಯಾಗಿದ್ದಳು

ಆರೋಪಿ ಲಕ್ಷ್ಮೀ ಹಾಗೂ ಮೃತ ಲಕ್ಷ್ಮೀ ಇಬ್ಬರೂ ಸೋದರ ಸಂಬಂಧಿಗಳಾಗಿದ್ದು, ಆರೋಪಿ ಲಕ್ಷ್ಮೀ ಮೃತಳ ಗಂಡ ಗಂಗಾರಾಮ್‌ನ ಆಕರ್ಷಣೆಗೆ ಒಳಗಾಗಿದ್ದಳು. ಅಲ್ಲದೆ, ಸಲುಗೆಯಿಂದ ಇದ್ದು, ತನ್ನ ದಾರಿಗೆ ಅಡ್ಡವಾಗಿದ್ದ ಲಕ್ಷ್ಮೀಯನ್ನು ಗಂಗಾರಾಮ್‌ನಿಂದ ದೂರ ಮಾಡಲು ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯ ತರಲು ಪ್ರಯತ್ನಿಸಿದ್ದಳು. ಆದರೆ ಅದು ಸಫಲವಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಮಾಡುವ ತೀರ್ಮಾನಕ್ಕೆ ಬಂದು ತನ್ನ ಗ್ರಾಮವಾದ ಮೈಸೂರು ತಾಲೂಕು ಬೆಲವೆತ್ತ ಗ್ರಾಮದ ಕೋಳಿ ಅಂಗಡಿಯೊಂದರಲ್ಲಿ ಮಾಂಸ ಕತ್ತರಿಸುವ ಮಚ್ಚನ್ನು ಪಡೆದು, ಇದರೊಂದಿಗೆ ದೊಡ್ಡ ಸುತ್ತಿಗೆಯ ಜತೆ ಶನಿವಾರ ರಾತ್ರಿ ಕೆಆರ್‌ಎಸ್‌ನಲ್ಲಿರುವ ಗಂಗಾರಾಮ್‌ ಮನೆಗೆ ಬಂದಿದ್ದಾಳೆ.

ಮುಂಜಾನೆ ಸುಮಾರು 3 ಗಂಟೆ ಸಮಯದಲ್ಲಿ ಆರೋಪಿ ಲಕ್ಷ್ಮೀ, ಗಂಗಾರಾಮ್‌ ಪತ್ನಿ ಮತ್ತು ಮಕ್ಕಳನ್ನು ಹತ್ಯೆ ಮಾಡಿದ ಬಳಿಕ ಸುಮಾರು ಒಂದೂವರೆ ಗಂಟೆಗಳ ಕಾಲ ಅಲ್ಲೇ ಇದ್ದು, ಕೃತ್ಯವನ್ನು ಮರೆಮಾಚುವ ಉದ್ದೇಶದಿಂದ ಮೃತರ ಮೇಲೆ ಬ್ಲಾಂಕೇಟ್‌ ಹೊದಿಸಿ ಅವರ ಮನೆಯ ಅಲ್ಮೇರಾದಲ್ಲಿದ್ದ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಳ್ಳತನಕ್ಕೆ ಬಂದವರ ಕೃತ್ಯವೆಂಬ ನಂಬಿಕೆ ಬರುವಂತೆ ಮಾಡಿದ್ದಾಳೆ

ಇದನ್ನು ಒದಿ : https://cnewstv.in/?p=8338

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*