Breaking News

ಶಿವಮೊಗ್ಗ ವಿಮಾನ ನಿಲ್ದಾಣ ಸದ್ಯದಲ್ಲಿಯೇ ಲೋಕಾರ್ಪಣೆ. ಶಿವಮೊಗ್ಗದಿಂದ 11 ಪ್ರಮುಖ ವಿಮಾನ ನಿಲ್ದಾಣಕ್ಕೆ ಜೋಡಣೆ ಮಾಡಿರುವ ಮಾರ್ಗಗಳು..

Cnewstv.in / 10.02.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಶಿವಮೊಗ್ಗ ವಿಮಾನ ನಿಲ್ದಾಣ ಸದ್ಯದಲ್ಲಿಯೇ ಲೋಕಾರ್ಪಣೆ. ಶಿವಮೊಗ್ಗದಿಂದ 11 ಪ್ರಮುಖ ವಿಮಾನ ನಿಲ್ದಾಣಕ್ಕೆ ಜೋಡಣೆ ಮಾಡಿರುವ ಮಾರ್ಗಗಳು..

ಶಿವಮೊಗ್ಗ : ಶಿವಮೊಗ್ಗ ವಿಮಾನ ನಿಲ್ದಾಣ ಸದ್ಯದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ. ಇಂದು ಶಿವಮೊಗ್ಗ ಲೋಕಸಭಾ ಸದಸ್ಯರಾದ ಶ್ರೀ ಬಿ.ವೈ ರಾಘವೇಂದ್ರ ರವರು ಕೇಂದ್ರ ನಾಗರಿಕ ವಿಮಾನ ಖಾತೆಯ ಸಚಿವರಾದ ಶ್ರೀ ಜ್ಯೋತಿರಾಧಿತ್ಯ ಸಿಂಧಿಯಾ ಇವರನ್ನು ಭೇಟಿಯಾಗಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣ ಸದ್ಯದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ, ಇದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ರಾಜ್ಯದ ಎರಡನೇ ಅತಿ ಉದ್ದ ವಿರುವ runway ಹೊಂದಿದ್ದು, ಶಿವಮೊಗ್ಗ ಜಿಲ್ಲೆ ಕರ್ನಾಟಕ ಭೂಪಟದ ಮಧ್ಯಭಾಗದಲ್ಲಿ ಇರುತ್ತದೆ. ಆದ್ದರಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆದಷ್ಟು ಬೇಗ Multi Disciplinary Team ಕೂಡಲೇ ಕಳುಹಿಸಿಕೊಡುವುದು, Electrical Equipment Funding ಮತ್ತು RCS UDAN-4.2 ಯೋಜನೆ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳ ಜನರಿಗೆ ದೇಶದ ಮಹಾನಗರಗಳಿಗೆ ಹೋಗಿಬರಲು ಮತ್ತು ವ್ಯಾಪಾರ ಹಾಗೂ ಪ್ರವಾಸೋದ್ಯಮ ಸಲುವಾಗಿ ಬರುವ ಪ್ರಯಾಣಿಕರನ್ನು ಉತ್ತೇಜನ ನೀಡುವ ಸಲುವಾಗಿ ಶಿವಮೊಗ್ಗ ವಿಮಾನ ನಿಲ್ದಾಣ ಮೂಲಕ ದೇಶದ 11 ಪ್ರಮುಖ ನಗರಗಳ ವಿಮಾನ ನಿಲ್ದಾಣಕ್ಕೆ ಜೋಡಣೆ ಮಾಡುವ ಮಾರ್ಗಗಳನ್ನು ಗುರುತಿಸಲಾಗಿದೆ.

ಶಿವಮೊಗ್ಗದಿಂದ 11 ಪ್ರಮುಖ ವಿಮಾನ ನಿಲ್ದಾಣಕ್ಕೆ ಜೋಡಣೆ ಮಾಡಿರುವ ಮಾರ್ಗಗಳು..

1. ಮುಂಬೈ-ಶಿಮೊಗ್ಗ- ಮುಂಬೈ
2. ಮುಂಬೈ-ಶಿವಮೊಗ್ಗ- ಮಂಗಳೂರು
3. ಮುಂಬೈ-ಶಿವಮೊಗ್ಗ- ಚೆನ್ನೈ
4. ಮುಂಬೈ-ಶಿವಮೊಗ್ಗ- ತಿರುಪತಿ
5. ಶಿವಮೊಗ್ಗ-ಗುಲ್ಬರ್ಗ- ಹೈದರಾಬಾದ್
6. ಶಿವಮೊಗ್ಗ-ಗುಲ್ಬರ್ಗ-ದೆಹಲಿ
7. ಬೆಂಗಳೂರು-ಶಿವಮೊಗ್ಗ- ಬೆಳಗಾವಿ,
8. ಬೆಂಗಳೂರು-ಶಿವಮೊಗ್ಗ- ದೆಹಲಿ
9. ಕೊಚ್ಚಿನ್- ಶಿವಮೊಗ್ಗ-ದೆಹಲಿ
10. ಬೆಂಗಳೂರು-ಶಿವಮೊಗ್ಗ- ಗೋವಾ
11. ಹೈದರಾಬಾದ್-ಶಿಮೊಗ್ಗ- ಕೊಚ್ಚಿನ್

ಈ ಮಾರ್ಗಗಳನ್ನು ಕೂಡಲೇ ಟೆಂಡರ್ ಕರೆಯುವ ಮೂಲಕ ವಿಮಾನ ಸಂಚರಿಸಲು ಅಗತ್ಯ ಕ್ರಮಗಳನ್ನು ಕೂಡಲೇ ಕೈಗೊಳ್ಳಲು ಮಾನ್ಯ ಕೇಂದ್ರ ಮಂತ್ರಿಗಳನ್ನು ಈ ಸಂದರ್ಭದಲ್ಲಿ ಕೋರಿದ್ದಾರೆ.

ಇದನ್ನು ಒದಿ : https://cnewstv.in/?p=8330

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*