Cnewstv.in / 10.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸೆಕ್ಷನ್ 144 ನಿಷೇದಾಜ್ಞೆ ಅಂತ್ಯ, ಸಹಜಸ್ಥಿತಿಯತ್ತ ನಗರ.
ಶಿವಮೊಗ್ಗ : ಹಿಜಾಬ್ – ಕೇಸರಿ ಶಾಲು ಸಂಬಂಧಿಸಿದಂತೆ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ಹೋದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಡಾ. ನಾಗರಾಜುರವರು 2 ದಿನಗಳ ನಿಷೇದಾಜ್ಞೆ ಹೊರಡಿಸಿದ್ದರು.
ನಿಷೇಧಾಜ್ಞೆ ಹಿನ್ನೆಲೆಯಲ್ಲಿ ನಿನ್ನೆ ನಗರದ ಪ್ರಮುಖ ರಸ್ತೆಗಳಲ್ಲಿ ಹಾಗು ವೃತ್ತಗಳಲ್ಲಿ ಪೊಲೀಸರು ರೂಟ್ ಮಾರ್ಚ್ ಮಾಡಿದ್ದರು. ನೆನ್ನೆ ರಾತ್ರಿಗೆ ನಿಷೇದಾಜ್ಞೆ ಅವಧಿ ಮುಗಿದಿದೆ. ಇಂದು ಬೆಳಿಗ್ಗೆ ಶಿವಮೊಗ್ಗ ನಗರ ಸಹಜ ಸ್ಥಿತಿಯತ್ತ ಮರಳಿದೆ.
ನಗರದ ಅನೇಕ ಅಂಗಡಿಗಳು ನಿಷೇಧದ ಹಿನ್ನೆಲೆಯಲ್ಲಿ ಬಂದು ಮಾಡಲಾಗಿತ್ತು ಆದರೆ ಎಲ್ಲಾ ಅಂಗಡಿಗಳನ್ನು ಓಪನ್ ಮಾಡಲಾಗಿದ್ದು, ವ್ಯಾಪಾರ ವಹಿವಾಟುಗಳು ನಡೆಯುತ್ತಿದೆ. ಇನ್ನು ಶಾಲಾ-ಕಾಲೇಜುಗಳು ಶುಕ್ರವಾರದವರೆಗೂ ರಜೆ ಇದ್ದು, ಶನಿವಾರ ಪುನರಾರಂಭವಾಗಲಿದೆ.
ಇದನ್ನು ಒದಿ : https://cnewstv.in/?p=8330
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv