Cnewstv.in / 09.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಚರ್ಚೆಗೆ ಗ್ರಾಸವಾಗಿದ್ದ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಹಾರಿಸಿದ NSUI.
ಶಿವಮೊಗ್ಗ : ಬಾಪೂಜಿನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಇಂದು NSUI ವತಿಯಿಂದ ಬೆಳಗ್ಗೆ ರಾಷ್ಟ್ರಧ್ವಜ ಹಾರಿಸಿ ಗೌರವ ಸಲ್ಲಿಸಲಾಯಿತು.

ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ನೆನ್ನೆ ತಾರಕಕ್ಕೆ ಹೋಗಿ ಕಾಲೇಜು ಆವರಣದಲ್ಲಿ ಕಲ್ಲುತೂರಾಟ ನಡೆದ ಲಘು ಲಾಠಿ ಪ್ರಹಾರ ಕೂಡ ನಡೆದಿತ್ತು. ವಿದ್ಯಾರ್ಥಿಯೊಬ್ಬರು ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜವನ್ನ ಕೆಳಗಿಳಿಸಿ ಕೇಸರಿ ಧ್ವಜವನ್ನ ಹಾರಿಸಲಾಗಿತ್ತು ಎಂದು ವಿವಾದವಾಗಿತ್ತು. ಕಾಲೇಜು ಆವರಣದಲ್ಲಿ ವಿದ್ಯಾರ್ಥಿ ಕೇಸರಿ ಧ್ವಜವನ್ನು ಹಾರಿಸಿದ ವಿಡಿಯೋ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು
ಭಾರತ ಹಲವು ಧರ್ಮಗಳ ಬೀಡು. ನಮ್ಮ ಸಂವಿಧಾನದಲ್ಲಿ ಎಲ್ಲ ಧರ್ಮಗಳ ಆಚರಣೆಗೂ ಅವಕಾಶವಿದ್ದು, ಎಲ್ಲರೂ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಆದರೆ, ರಾಜಕೀಯ ಹಿತಾಸಕ್ತಿಯಿಂದ ಕಾಣದ ಕೈಗಳ ಕುಮ್ಮಕ್ಕಿನಿಂದಾಗಿ ಹಿಜಾಬ್ ಕೇಸರಿಶಾಲು ವಿವಾದ ಸೃಷ್ಟಿಸಿದ್ದು, ಇದನ್ನು ಎನ್ ಎಸ್ ಯು ಐ ತೀವ್ರವಾಗಿ ಖಂಡಿಸುತ್ತದೆ. ದೇಶದಲ್ಲಿ ಹಿಜಾಬ್ ಅಥವಾ ಕೇಸರಿ ಶಾಲು ಮುಖ್ಯವಲ್ಲ. ತ್ರಿವರ್ಣ ಧ್ವಜವೇ ಸರ್ವಶ್ರೇಷ್ಠ. ಆದ್ದರಿಂದ ಇಂದು ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ವಿದ್ಯಾರ್ಥಿಗಳು ಹಿಜಾಬ್ ಕೇಸರಿ ಶಾಲು ವಿಚಾರ ಕೈಬಿಡಬೇಕು. ಹಿಂದಿನಂತೆ ತರಗತಿಗಳಲ್ಲಿ ಬ್ರಾತೃತ್ಬ ಭಾವನೆಯಿಂದ ಇರಬೇಕೆಂದು ಹಾಗೂ ವಿದ್ಯಾರ್ಥಿಗಳು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು NSUI ವತಿಯಿಂದ ಮನವಿ ಮಾಡಿಕೊಂಡಿದ್ದಾರೆ.
ಇದನ್ನು ಒದಿ : https://cnewstv.in/?p=8305
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv