Cnewstv.in / 08.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಹಿಜಾಬ್ – ಕೇಸರಿ ಶಾಲು ವಿವಾದ : ವಾಟ್ಸಾಪ್ ಚಾಟ್ ಬಿಡುಗಡೆ ಮಾಡಿದ ಜಿಲ್ಲಾ ಬಿಜೆಪಿ..
ಶಿವಮೊಗ್ಗ : ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಸಾಕಷ್ಟು ವಿವಾದವನ್ನು ಸೃಷ್ಟಿಮಾಡಿದ ಹಿಜಾಬ್ – ಕೇಸರಿ ಶಾಲು ಪ್ರಕರಣ ಪೂರ್ವ ಯೋಜಿತ, ಕೋಮುಭಾವನೆ ಪ್ರಚೋದಿಸುವ ಕೆಲಸ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿ.ಡಿ.ಮೇಘರಾಜ್ ಆರೋಪಿಸಿದ್ದಾರೆ.
ವಾಟ್ಸಪ್ ಗ್ರೂಪ್ ಗಳಲ್ಲಿ ಮೆಸೇಜ್ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಲಾಗುತ್ತಿದೆ. ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳ ವಾಟ್ಸಪ್ ಗ್ರೂಪ್ ನಲ್ಲಿ ನಡೆದ ಚಾಟ್ ಇದಕ್ಕೆ ಸಾಕ್ಷಿಯಾಗಿದೆ. ಪಾಕಿಸ್ತಾನದ ಧ್ವಜ ಮತ್ತು ಆದೇಶದ ಪರವಾಗಿ ಚರ್ಚೆಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಪ್ರಚೋದಿಸಲಾಗುತ್ತದೆ.
ರಾಜಕೀಯವಾಗಿ ತನ್ನ ಶಕ್ತಿ ವೃದ್ಧಿಗಾಗಿ ಎಸ್ ಡಿ ಪಿ ಐ. ಪಿಎಫ್ ಐ, ಸಿಎಫ್ಐ ಸಂಘಟನೆಗಳು ಪೂರ್ವಯೋಜಿತವಾಗಿ ವಿವಾದ ಸೃಷ್ಟಿಸಿದೆ. ವಿದ್ಯಾರ್ಥಿ ಸಮೂಹಕ್ಕೆ ಜಾತಿ ಧರ್ಮದ ವಿಷಬೀಜ ಬಿತ್ತುತ್ತಿದ್ದಾರೆ. ಕೂಡಲೇ ಇದರ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಹಿಂದೂ ಸಂಘಟನೆಗಳ ಹೆಸರಿನಲ್ಲಿ ನಕಲಿ ವಾಟ್ಸಾಪ್ ಗ್ರೂಪ ಸೃಷ್ಠಿಸಿ ಒಂದು ಧರ್ಮದ ವಿರುದ್ಧ ಅವಾಚ್ಯ ನಿಂದನೆ ಪದಗಳನ್ನು ಬಳಸಿ ಧರ್ಮದ ವಿರುದ್ಧ ಸಂಗತಿಗಳನ್ನು ಪ್ರಕಟಿಸಿ ಹರಿಬಿಡುತ್ತಿದ್ದಾರೆ. ಇದು ಕೂಡ ಒಂದು ಷಡ್ಯಂತ್ರವಾಗಿದೆ. ಇದನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ. ಯಾವುದೇ ಕಾರಣಕ್ಕೂ ಕಾಲೇಜಿನ ವಾತಾವರಣ ರಾಜಕಾರಣಕ್ಕೆ ಬಳಸಲು ಬಿಡುವುದಿಲ್ಲ. ಈಗಾಗಲೇ ಲಷ್ಕರ್ ಮೊಹಲ್ಲಾದಲ್ಲಿ ಪೊಲೀಸರು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲಿ ಗಣೇಶ್ ಮತ್ತು ಪ್ರಜ್ವಲ್ ಎನ್ನುವ ಸಹೋದರರ ಮೇಲೆ ಹಲ್ಲೆ ನಡೆದಿದೆ. ಬಾಪೂಜಿ ನಗರ ಕಾಲೇಜಿನಲ್ಲಿ ಅರ್ಜುನ್, ಮಂಜು ಮತ್ತು ಸಂಕೇತ್ ಎನ್ನುವವರ ಮೇಲೆ ಹಲ್ಲೆ ನಡೆದಿದ್ದು, ಸಾಗರದ ಕಾಲೇಜೊಂದರಲ್ಲಿ 9 ಜನರ ಮೇಲೆ ಹಲ್ಲೆ ಮಾಡಲಾಗಿದ್ದು, ಇವರೆಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಲ್ಲೆ ಮಾಡಿದವರ ಮೇಲೆ ದೂರು ದಾಖಲಿಸಿ ಬಂಧಿಸಬೇಕು. ಗಲಭೆ ನಿಯಂತ್ರಿಸಲು ಬ್ಯಾಲೆನ್ಸ್ ಗಾಗಿ ಹಿಂದೂಗಳ ಮೇಲೆ ಕೇಸ್ ಹಾಕಿದರೆ ಸಹಿಸುವುದಿಲ್ಲ. ವಿಚಿಧ್ರಕಾರಿ ಶಕ್ತಿಗಳಿಂದ ಅಶಾಂತಿ ಹರಡಿಸಿ ಸಿದ್ಧತೆ ಮಾಡಿಕೊಂಡವರ ಮುಖವಾಡ ಸಾಕ್ಷಿ ಸಮೇತ ಕಳಚಿ ಬಿದ್ದಿದ್ದು, ಮಾರಕಾಸ್ತ್ರಗಳು ಎಲ್ಲಿತ್ತು, ಯಾಕೆ ಸಂಗ್ರಹಿಸಿದ್ದರು ಎನ್ನುವುದರ ಬಗ್ಗೆ ಪೂರ್ಣ ತನಿಖೆಯಾಗಬೇಕು. ಈ ಬಗ್ಗೆ ದೊಡ್ಡಪೇಟೆ ಠಾಣೆಯಲ್ಲಿ ಜಿಲ್ಲಾ ಬಿಜೆಪಿ ದೂರು ದಾಖಲಿಸಲಿದೆ ಎಂದರು.
ಇದನ್ನು ಒದಿ : https://cnewstv.in/?p=8294
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv