Cnewstv.in / 07.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮಲೆನಾಡಿಗೂ ಹಬ್ಬಿದ ಹಿಜಾಬ್, ಕೇಸರಿ ಶಾಲು ಸಂಘರ್ಷ. ATNCC ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಶಿವಮೊಗ್ಗ : ರಾಜ್ಯಾದ್ಯಂತ ಸುದ್ದಿಯಾಗಿದ್ದ ಹಿಜಾಬ್ ಮತ್ತು ಕೇಸರಿ ಶಾಲು ಸಂಘರ್ಷ ಇದೀಗ ಮಲೆನಾಡಿಗೂ ಕಾಲಿಟ್ಟಿವೆ.
ಇಂದು ಬೆಳಿಗ್ಗೆ ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು, ಮತ್ತೊಂದೆಡೆ ಮುಸ್ಲಿಂ ಮಹಿಳಾ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಇಸಾಬ್ ದರಿಸಲು ನಿಷೇಧಿಸಿರುವ ಆದೇಶವನ್ನು ಪುನರ್ ಪರಿಶೀಲಿಸಿ ಎಂದು ಪ್ರತಿಭಟನೆ ನಡೆಸಲಾಯಿತು.
ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾದರೆ ನಾವು ಕೂಡ ಕೇಸರಿ ಶಾಲು ಧರಿಸಿ ತರಗತಿಗಳಿಗೆ ಹಾಜರಾಗಿ ಅಂತ ವಿದ್ಯಾರ್ಥಿಗಳು ಮತ್ತೊಂದೆಡೆ ಧಾರ್ಮಿಕ ಹಕ್ಕುಗಳ ಅಡಿಯಲ್ಲಿ ಹಿಜಾಬ್ ಧರಿಸಲು ಅವಕಾಶವಿದ್ದು ಸರ್ಕಾರ ತನ್ನ ಆದೇಶವನ್ನು ಪರಿಶೀಲನೆ ನಡೆಸಬೇಕು ಎಂದು ಮುಸ್ಲಿಂ ಮಹಿಳಾ ಒಕ್ಕೂಟದಿಂದ ಆಗ್ರಹ.
ATNCC ಕಾಲೇಜಿನಲ್ಲಿ ಪ್ರತಿಭಟನೆ..
ಇದೇ ಬೆನ್ನಲ್ಲೇ ನಗರದ ATNCC ಕಾಲೇಜ್ ಆವರಣದಲ್ಲಿ ವಿಧ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿದರು. ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾದರೆ ನಾವು ಕೂಡ ಕೇಸರಿ ಶಾಲು ಧರಿಸಿ ತರಗತಿಗಳಿಗೆ ಹಾಜರಾಗಿ ಅಂತ ವಿದ್ಯಾರ್ಥಿಗಳು ಪ್ರತಿಭಟಿಸಿದರು.
ನಂತರ ಮಾತನಾಡಿದ ಕಾಲೇಜು ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯವರು ಕಾಲೇಜಿನಲ್ಲಿ ನಿಗದಿ ಮಾಡಲಾಗಿರುವ ಸಮವಸ್ತ್ರವನ್ನೇ ಎಲ್ಲರೂ ಧರಿಸಬೇಕು ಎಂದರು.
ಒಟ್ಟಿನಲ್ಲಿ ಕೊರೊನಾ ಕರಿನೆರಳು ದೂರವಾಗಿ ಶಾಲಾ-ಕಾಲೇಜುಗಳು ಆರಂಭವಾಗುತ್ತಿದೆ ಎನ್ನುವಾಗಲೇ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಭುಗಿಲೆದ್ದಿದೆ.
ಇದನ್ನು ಒದಿ : https://cnewstv.in/?p=8262
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments