Cnewstv.in / 07.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಹಿಜಬ್ ಧರಿಸಲು ನಿಷೇಧಿಸಿರುವ ಆದೇಶವನ್ನು ಪುನರ್ ಪರಿಶೀಲಿಸಿ..
ಸಂವಿಧಾನಿಕ ಧಾರ್ಮಿಕ ಹಕ್ಕುಗಳ ಅಡಿಯಲ್ಲಿ ಹಿಜಬ್ ಧರಿಸಲು ನಿಷೇಧಿಸಿರುವ ಆದೇಶವನ್ನು ಪುನರ್ ಪರಿಶೀಲಿಸುವಂತೆ ಮುಸ್ಲಿಂ ವಿದ್ಯಾರ್ಥಿನಿಯರ ಮುಸ್ಲಿಂ ಮಹಿಳೆಯರ ಶಿವಮೊಗ್ಗ ಮಹಿಳಾ ಒಕ್ಕೂಟದ ಪರವಾಗಿ ರಾಷ್ಟಪತಿ ಹಾಗೂ ಮುಖ್ಯ ಮಂತ್ರಿಗಳಿಗೆ ವಿನಂತಿ ಮಾಡಿದರು.
ಶಿವಮೊಗ್ಗ : ಮಹಮದ್ ಸಲ್ಲಲ್ಲಾಹು ಅಲೈಹಿವಸಲ್ಲಂ ಪೈಗಂಬರ್ ರವರು ಜನಿಸಿದ ಕಾಲದಿಂದಲೂ ಮತ್ತು ನಮ್ಮ ಮುಸ್ಲಿಂ ಜನಾಂಗದವರು ತಮ್ಮ ಪವಿತ್ರ ಕುರಾನ್ ಹಾಗೂ ಧಾರ್ಮಿಕಗ್ರಂಥಗಳದ ಬೈಬಲ್ ಮತ್ತು ರೀಗ್ರೇಧ ಹೇಳುತ್ತದೆ:
ಸತ್ಯ ವಿಶ್ವಾಸಿನಿಯವರೊಂದಿಗೆ ಅವರು ತಮ್ಮ ದೃಷ್ಟಿಗಳನ್ನು ತಗ್ಗಿಸುವಂತೆ ಮತ್ತು ತಮ್ಮಗುಪ್ತಾಂಗಳನ್ನು ಕಾಪಾಡಿಕೊಳ್ಳುವಂತೆ ಹೇಳಿರಿ.ತಮ್ಮ ಸೌಂದರ್ಯದಿಂದ ಪ್ರಕಟವಾದುದರ ಹೊರತು ಬೇರಾವುದನ್ನೂ ಅವರು ಪ್ರದರ್ಶಿಸದಿರಲಿ.ಅವರು ತಮ್ಮ ಶಿರವಸ್ತ್ರಗಳನ್ನು ತಮ್ಮ
ಎದೆಗಳ ಮೇಲೆ ಎಳೆದುಕೊಳ್ಳಲಿ. ಕುರ್ ಆನ್ (24:31)
ಬೈಬಲ್ ಹೇಳುತ್ತದೆ:-ತಲೆಯ ಮೇಲೆ ಮುಸುಕು ಹಾಕಿ ಕೊಳ್ಳದ ಪ್ರಾರ್ಥನೆಯನ್ನಾಗಲಿ ಪ್ರವಾದನೆಯನ್ನಗಾಲಿ ಮಾಡುವ ಪ್ರತಿಯೊಬ್ಬ ಸ್ತ್ರೀಯು ತನ್ನ ತಲೆಯನ್ನು ಅವಮಾನಪಡಿಸುತ್ತಾಳೆ. ಯಾಕೆಂದರೆ ಸ್ತ್ರೀಯು ಮುಸುಕಿಲ್ಲದಿರುವುದು ತಲೆಬೋಳಿಸಿ ಕೊಂಡಿರುವುದು ಒಂದೇ(ಕೊರಿಂಥವರಿಗೆ1:6) ರೀಗೈದ ಹೇಳುತ್ತದೆ:-ಓ ಸ್ತ್ರೀಯೇ ನೀನು ನಿನ್ನ ನೋಟವನ್ನು ತಗ್ಗಿಸು,ಅನ್ಯ ಪುರುಷರ ಮುಂದೆ ನಿನ್ನ ದೃಷ್ಟಿಯನ್ನು ತಗ್ಗಿಸು, ನಿನ್ನ ಶರೀರದ ಸಂಪೂರ್ಣ ಭಾಗವನ್ನು ಮುಚ್ಚಿಕೊ,ಸಂಸಾರ ದಲ್ಲಿ ನಿನ್ನ ಘನತೆಯು ತುಂಬಾ ಪ್ರಮುಖ್ಯತೆಯನ್ನು ಹೊಂದಿದೆ.(ರೀಗೋಧ 8:33:19) ತಿಳಿದಿರುವಂತಹ ಆದೇಶಗಳನ್ನು ಪಾಲಿಸಿಕೊಂಡು ಈ ದೇಶದ ಸಂವಿಧಾನವು ತಿಳಿದಿರುವಂತಹ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲನೆ ಮಾಡಿಕೊಂಡು ನಾವುಗಳು ಧಾರ್ಮಿಕ ಮತ್ತು ಶೈಕ್ಷಣಿಕ ಹಕ್ಕುಗಳನ್ನು ರೂಢಿಸಿಕೊಂಡು ಹಿಂದಿನಿಂದಲೂ ಅನುಸರಿಸಿಕೊಂಡು ನಮ್ಮ ಜೀವನವನ್ನು ಸಾಗಿಸಿಕೊಂಡು ಬರುತ್ತಿದ್ದು ಅದರಂತೆ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆಯುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಮತ್ತು ಜ್ಞಾನಾರ್ಜನ ಸಲುವಾಗಿ ಈ ಶಿಕ್ಷಣವನ್ನು ಅನುಸರಿಸಿಕೊಂಡು ಬರುತ್ತಿದ್ದು ನಾವುಗಳು ಹಿಜಾಬ್ ಮತ್ತು ಬುರುಕ ಧಾರಣೆ ಮಾಡುವ
ಮೂಲಕ ಪ್ರತಿಯೊಬ್ಬ ಮುಸ್ಲಿಮರಿಗೆ ಮನೆಯಿಂದ ಆಚೆ ಹೋದಂತಹ ಸಂದರ್ಭದಲ್ಲಿ ಹಾಗೂ ವೃತ್ತಿ ಮಾಡುವ ಮತ್ತು ಶೈಕ್ಷಣಿಕವಾಗಿ ಕಲಿಯುವಂತಹ ಶಾಲೆ ಕಾಲೇಜ್ ಹಾಗೂ ಸಭೆ ಸಮಾರಂಭಗಳಲ್ಲಿ ಮತ್ತು ವಿವಾಹ ಸಂದರ್ಭದಲ್ಲಿ ಸಹ ಸಂಪ್ರದಾಯದಂತೆ ಹಾಗೂ ಇನ್ನೊಬ್ಬರ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗದಂತ ಮತ್ತು ಈ ನಮ್ಮ ಸಂವಿಧಾನದ ಕಾನೂನು ಅಡಿಯಲ್ಲಿ ಹೇಳಿದಂತಹ ಎಲ್ಲಾ ನಿಯಮಗಳನ್ನು ಪಾಲನೆ ಮಾಡಿಕೊಂಡು ಇದುವರೆಗೂ ಸಹ
ಸಹಬಾಳ್ವೆಯಿಂದ ಶಾಲಾ-ಕಾಲೇಜುಗಳಲ್ಲಿ ಜ್ಞಾನಾರ್ಜನೆಯನ್ನು ಮಾಡಿಕೊಂಡು ಹೋಗುತ್ತಿದ್ದು ಅಲ್ಲಿ ಯಾವತ್ತು ಸಹ ನಮ್ಮನ್ನು ನಮ್ಮ ಸಹಪಾಠಿ ವಿದ್ಯಾರ್ಥಿಮಿತ್ರರು ನಾವುಗಳು
ಧರಿಸುವಂತಹ ಹಿಜಾಬ್ ಮತ್ತು ಬುರ್ಖಾ ವಸ್ತ್ರ ಉಡುಪುಗಳ ಹಾಕುವ ಬಗ್ಗೆ ಎಲ್ಲಿಯೂ ವಿರೋಧವನ್ನು ವ್ಯಕ್ತ ಪಡಿಸುವುದಿಲ್ಲ ಮತ್ತು ನಮ್ಮ ಬಗ್ಗೆ ಯಾವ ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರಿ ಶಾಲೆಗಳು ಹಾಗೂ ಅಧ್ಯಾಪಕರು ಸಹ ಈ ಬಗ್ಗೆ ಆರೋಪವನ್ನು ಸಹ ಮಾಡಿರುವುದಿಲ್ಲ.
ಏಕಾಏಕಿ ಕುಂದಾಪುರ ಮತ್ತು ಉಡುಪಿಯ ಕೆಲವೇ ಶಾಲೆಗಳಲ್ಲಿ ನಮ್ಮ ಅಕ್ಕ ತಂಗಿಯರು ಮತ್ತು ವಿದ್ಯಾರ್ಥಿಗಳು ಧರಿಸುವಂತಹ ಕೇವಲ ರಾಜಕೀಯ ಮತ್ತು ಕೆಲವೊಂದು ಕೋಮುವಾದ ಸಂಘಟನೆಗಳ ಪಿತೂರಿಯಿಂದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಈ ರೀತಿ ಗುರುತರ ಆರೋಪಗಳನ್ನು ಮಾಡುವುದರಿಂದ ಅವರ ವಿದ್ಯಾಭ್ಯಾಸದ ಮೇಲೆ ಮತ್ತು ಅವರ ಪೋಷಕರ
ಮೇಲೆ ಹೆಚ್ಚಿನ ಒತ್ತಡ ಬೀಳುವ ಮೂಲಕ ಮುಂದಿನ ಶೈಕ್ಷಣಿಕ ಜೀವನವು ಮೊಟಕುಗೊಳ್ಳುತ್ತದೆ.
ಇದರಿಂದ ಮಾನ್ಯ ರಾಜ್ಯ ಸರ್ಕಾರವು ಮಾಡಿರುವಂತಹ ವಸ್ತ್ರಸಂಹಿತ ಆದೇಶದಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿ ಈ ಹಿಂದೆ ಮುಸ್ಲಿಂ ವಿದ್ಯಾರ್ಥಿನಿಯರು ಧರಿಸಿಕೊಂಡು
ಬರುತ್ತಿದ್ದಂತಹ ಹಿಜಾಬ್ ಹಾಗೂ ಬುರ್ಖಾವನ್ನು ಧರಿಸಿಕೊಂಡು ಬರಲು ತಾವುಗಳು ಅನುಮತಿಯನ್ನು ನೀಡಬೇಕು ಎಂದರು.
ಪ್ರತಿಭಟನೆಯ ನೇತೃತ್ವವನ್ನು ಒಕ್ಕೂಟದ ಮುಖಂಡರಾದ ಎಹಸಸ್ ಎ ನಾಯಬ್, ಹೀನ ಕೌಸರ್, ಯಾಸ್ಮಿನ್, ಒಮ್ಮೆ ಸಲ್ಮಾ, ಸೋಫಿಯಾ, ಹಸೀನಾ, ಪೀಸ್ ಆರ್ಗನೈಜೆಷನ್ನ ಅಧ್ಯಕ್ಷ ರಿಯಾಜ್ ಅಹಮ್ಮದ್ ವಹಿಸಿದ್ದು, 500 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಇದನ್ನು ಒದಿ : https://cnewstv.in/?p=8259
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments