Cnewstv.in / 07.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಅಂತರರಾಷ್ಟ್ರೀಯ ಕಬಡ್ಡಿ ಸ್ಪರ್ಧೆಗೆ ಆನವಟ್ಟಿ ವಿದ್ಯಾರ್ಥಿ ಅಯ್ಕೆ..
ಶಿವಮೊಗ್ಗ : ಅಂತರರಾಷ್ಟ್ರೀಯ ಕಬಡ್ಡಿ ಸ್ಪರ್ಧೆಗೆ ಭಾರತ ತಂಡದ ಆಟಗಾರನಾಗಿ ಆಯ್ಕೆ ಆಗಿರುವ ಆನವಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬಿ. ರಾಜೇಶ್ ಪ್ರಸಾದ್ ಆಯ್ಕೆಯಾಗಿದ್ದಾರೆ.
ಶಾಲೆಯಲ್ಲಿ ಇಂದು ವಿದ್ಯಾರ್ಥಿ ಬಿ. ರಾಜೇಶ್ ಪ್ರಸಾದ್ ರವರನ್ನು ಕಾಲೇಜಿನಲ್ಲಿ ಸನ್ಮಾನಿಸಲಾಯಿತು. ಇದೇ ಫೆಬ್ರುವರಿ 11 ಮತ್ತು12 ರಂದು ನೇಪಾಳದ ಫೋಕಾರ್ ನಲ್ಲಿ ನಡೆಯುವ ಅಂತರರಾಷ್ಟ್ರೀಯ ಕಬಡ್ಡಿ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿ ರಾಜೇಶ್ ಪ್ರಸಾದ್ ಗೆ ಕಾಲೇಜಿನ ವಿದ್ಯಾರ್ಥಿಗಳು, ಪ್ರಾಚಾರ್ಯರು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರಿಂದ ಸಂಗ್ರಹಿಸಿದ 13,500 ರೂ. ಗಳನ್ನು ಪ್ರಾಚಾರ್ಯರಾದ ಶ್ರೀ ಜಗದೀಶ ಟಿ ಅವರು ರಾಜೇಶ್ ಪ್ರಸಾದ್ ಗೆ ಹಸ್ತಾಂತರಿಸಿದರು.
ಅಂತರರಾಷ್ಟ್ರೀಯ ಕಬಡ್ಡಿ ಸ್ಪರ್ಧೆಯಲ್ಲಿ ರಾಜೇಶ್ ಪ್ರಸಾದ್ ವಿಜಯಶಾಲಿಯಾಗಿ ಬರಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ರಾಜೇಶ್ ಪ್ರಸಾದ್ ಸ್ಪೂರ್ತಿ ಆಗಲಿ ಎಂದು ಸ. ಪ.ಪೂ.ಕಾಲೇಜಿನ ಎಲ್ಲ ಉಪನ್ಯಾಸಕರ ಪರವಾಗಿ ಶುಭ ಹಾರೈಸಿದರು.
ಇದನ್ನು ಒದಿ : https://cnewstv.in/?p=8257
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments