Breaking News
ಜಮೀನು ವಿವಾದ ಅಣ್ಣನಿಂದಲೇ ಟ್ರಾಕ್ಟರ್ ಹತ್ತಿಸಿ ತಮ್ಮನ ಕೊಲೆಗೆ ಯತ್ನ..

ಜಮೀನು ವಿವಾದ ಅಣ್ಣನಿಂದಲೇ ಟ್ರಾಕ್ಟರ್ ಹತ್ತಿಸಿ ತಮ್ಮನ ಕೊಲೆಗೆ ಯತ್ನ..

Cnewstv.in / 07.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಜಮೀನು ವಿವಾದ ಅಣ್ಣನಿಂದಲೇ ಟ್ರಾಕ್ಟರ್ ಹತ್ತಿಸಿ ತಮ್ಮನ ಕೊಲೆಗೆ ಯತ್ನ..

ಶಿವಮೊಗ್ಗ : ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣನೇ ತಮ್ಮನನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ನಗರದ ಸಮೀಪದ ಮೇಲಿನ ಹನಸವಾಡಿಯಲ್ಲಿ ನಡೆದಿದೆ.

ವೇದಮೂರ್ತಿ ಯವರ ಮಗ ಗೌತಮ್ (21) ಹಲ್ಲೆಗೊಳಗಾದವರು. ಗೌತಮ್ ಮೇಲೆ ಹಲ್ಲೆ ಮಾಡಿದವರು ವೇದಮೂರ್ತಿ ಅವರ ಅಣ್ಣನ ಮಗ ವಿನಯ್. ಇಂಜಿನಿಯರಿಂಗ್ ಪದವೀಧರನಾಗಿರುವ ವಿನಯ್, ಗೌತಮ್ ಮೇಲೆ ಟ್ರಾಕ್ಟರ್ ಹತ್ತಿಸಿದ್ದಾರೆ ಅಲ್ಲದೆ ಕಲ್ಟಿವೇಟರ್‌ನಿಂದ ಗಂಭೀರವಾಗಿ ಗಾಯಗೊಡಿದ್ದಾನೆ.

ವಿನಯ್ ಕುಮಾರ್ ಟ್ರಾಕ್ಟರ್‌ಗೆ ಅಳವಡಿಸಿದ್ದ ಕಲ್ಟಿವೇಟರ್‌ನಿಂದ ಸಾಕಷ್ಟು ಬಾರಿ ತಿವಿಸಿದ್ದು, ಬೆನ್ನು ಹಾಗೂ ಎದೆ ಭಾಗಕ್ಕೆ ಬಲವಾದ ಹೊಡೆತ ಬಿದ್ದಿದೆ. ರಿಂಗ್ ಸ್ಪಾನರ್‌ನಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಗೌತಮ್ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಆರೋಪಿ ಬಂಧನಕ್ಕೆ ಹಾಗೂ ಟ್ರಾಕ್ಟರ್ ವಶಕ್ಕೆ ಪಡೆಯಲು ಮುಂದಾಗಿದ್ದಾರೆ.

ಇದನ್ನು ಒದಿ : https://cnewstv.in/?p=8249

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*