Breaking News
ರೌಡಿಶೀಟರ್ ಸಭೆ : ರೌಡಿ ಹಾಳೆಯಲ್ಲಿದ್ದ 1423 ಜನರ ಹೆಸರನ್ನು ಕೈಬಿಟ್ಟ ಜಿಲ್ಲಾ ಪೊಲೀಸ್ ಇಲಾಖೆ.

ರೌಡಿಶೀಟರ್ ಸಭೆ : ರೌಡಿ ಹಾಳೆಯಲ್ಲಿದ್ದ 1423 ಜನರ ಹೆಸರನ್ನು ಕೈಬಿಟ್ಟ ಜಿಲ್ಲಾ ಪೊಲೀಸ್ ಇಲಾಖೆ.

Cnewstv.in / 06.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ರೌಡಿಶೀಟರ್ ಸಭೆ : ರೌಡಿ ಹಾಳೆಯಲ್ಲಿದ್ದ 1423 ಜನರ ಹೆಸರನ್ನು ಕೈಬಿಟ್ಟ ಜಿಲ್ಲಾ ಪೊಲೀಸ್ ಇಲಾಖೆ.

ಶಿವಮೊಗ್ಗ : ಜಿಲ್ಲೆಯ ರೌಡಿಹಾಳೆಯಲ್ಲಿದ್ದ 1423 ಜನರ ಹೆಸರನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ರೌಡಿ ಹಾಳೆಯಿಂದ ಕೈಬಿಟ್ಟಿದೆ.

ವಿವಿಧ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿದ್ದವರ ವಿರುದ್ಧ ಈ ಹಿಂದೆ ರೌಡಿ ಹಾಳೆಗಳನ್ನು ತೆರೆದು ಅವರುಗಳ ಮೇಲೆ ಪೊಲೀಸ್ ಇಲಾಖೆಯಿಂದ ಸೂಕ್ತ ನಿಗಾವಹಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತಿತ್ತು.‌

ಶಿವಮೊಗ್ಗ ಉಪ ವಿಭಾಗದಲ್ಲಿ ಪೊಲೀಸ್‌ ಅಧೀಕ್ಷಕರು, ಜಿಲ್ಲೆರವರ ನೇತೃತ್ವದಲ್ಲಿ ಹಾಗೂ ಭದ್ರಾವತಿ, ಸಾಗರ, ಶಿಕಾರಿಪುರ ಮತ್ತು ತೀರ್ಥಹಳ್ಳಿ ಉಪ ವಿಭಾಗಗಳಲ್ಲಿ ಸಂಬಂಧಪಟ್ಟ ಪೊಲೀಸ್‌ ಉಪಾಧೀಕ್ಷಕರ ನೇತೃತ್ವದಲ್ಲಿ ಹಲವು ವರ್ಷಗಳಿಂದ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗದೇ ಸುಧಾರಣೆಗೊಂಡಿರುವ ನಿಶ್ಚಲ ಕಡತವುಳ್ಳ ರೌಡಿಶೀಟರ್ ಗಳನ್ನು ಕರೆಸಿ ಸಭೆ ನಡೆಸಲಾಯಿತು.

ಅವರ ಗುಣ-ನಡೆತೆಯ ಆಧಾರದ ಮೇಲೆ ಅವರುಗಳ ಮೇಲೆ ಈ ಹಿಂದೆ ತೆರೆಯಲಾದ ರೌಡಿ ಹಾಳೆಗಳನ್ನು ತಾತ್ಕಾಲಿಕವಾಗಿ ಮುಕ್ತಾಯ ಮಾಡಲಾಗಿದ್ದು, ಈ ಬಗ್ಗೆ ಅವರುಗಳಿಗೆ ತಿಳುವಳಿಕೆ ನೀಡಿ, ಇನ್ನು ಮುಂದೆಯೂ ಕೂಡ ಯಾವುದೇ ರೀತಿಯ ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗದೇ ಸಮಾಜದಲ್ಲಿ ಉತ್ತಮ ಗುಣನಡೆತೆಯನ್ನು ಮುಂದುವರೆಸಿಕೊಂಡು ಹೋಗಲು ಹಾಗೂ ಜವಾಬ್ದಾರಿಯುತ ಪ್ರಜೆಯಾಗಿ ಜೀವನೆ ನಡೆಸಿ ಪೊಲೀಸ್ ಇಲಾಖೆ ಜೊತೆ ಸಹಕರಿಸುವಂತೆ ಸೂಚನೆಗಳನ್ನು ನೀಡಲಾಗಿರುತ್ತದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 1423 ರೌಡಿ ಹಾಳೆಗಳನ್ನು ತಾತ್ಕಾಲಿಕವಾಗಿ ಮುಕ್ತಾಯ ಮಾಡಲಾಗಿದ್ದು, ಹಾಲೀ 1378 ರೌಡಿ ಹಾಳೆಗಳು ಚಾಲ್ತಿಯಲ್ಲಿರುತ್ತವೆ ಇದರಲ್ಲಿ ಈ ದಿನ 427 ರೌಡಿಶೀಟರ್ ಗಳನ್ನು ಕರೆಸಿ, ಸಭೆ ನಡೆಸಿ ಸೂಕ್ತ ತಿಳುವಳಿಕೆ ನೀಡಲಾಯಿತು.

ಇದನ್ನು ಒದಿ : https://cnewstv.in/?p=8214

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*