Breaking News

ಸರ್ವಧರ್ಮ ಸಮನ್ವಯದ ಪ್ರವಚನಕಾರ ಇಬ್ರಾಹಿಂ ಸುತಾರ ಇನ್ನಿಲ್ಲ..

Cnewstv.in / 05.02.2022 / ಬಾಗಲಕೋಟೆ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಸರ್ವಧರ್ಮ ಸಮನ್ವಯದ ಪ್ರವಚನಕಾರ ಇಬ್ರಾಹಿಂ ಸುತಾರ ಇನ್ನಿಲ್ಲ..

ಬಾಗಲಕೋಟೆ : ಸರ್ವಧರ್ಮ ಸಮನ್ವಯದ ಪ್ರಚಾರಕರಾದ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರಾ (76) ಅವರು ಇಂದು ಬೆಳಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಬಡ ಕುಟುಂಬದಲ್ಲಿ 1940 ರ ಮೇ 10 ರಂದು ಜನಿಸಿದರು. ಇಬ್ರಾಹಿಂ ಸುತಾರಾ ಅವರ ತಂದೆ ನಬಿಸಾಹೇಬ್ ಮತ್ತು ತಾಯಿ ಅಮೀನಾಬಿ. ಅವರ ತಂದೆ ಬಡಗಿಯ ಕೆಲಸವನ್ನು ಮಾಡುತ್ತಿದ್ದರು ಬಡತನದ ಕಾರಣ ಹೆಚ್ಚು ಓದಲಾಗದೆ ಮೂರನೇ ತರಗತಿಯವರೆಗೆ ಶಿಕ್ಷಣವನ್ನು ಪಡೆದಿದ್ದರು.

ಮಸೀದಿಯಲ್ಲಿ ನಮಾಜ್ ಅಧ್ಯಯನ ಮಾಡಿದರು, ಬಳಿಕ ಭಗವದ್ಗೀತೆಯನ್ನು ಅಧ್ಯಯನ ಮಾಡಿದರು. ಭಾವೈಕ್ಯತೆಯನ್ನು ಹರಡುವಂತಹ ಪ್ರಚಾರವನ್ನು ಮಾಡುತ್ತಿದ್ದರು. ಅವರನ್ನ ಆಧುನಿಕ ಸೂಫಿಸಂತ, ಕನ್ನಡದ ಕಬೀರ ಎಂದೇ ಕರೆಯಲಾಗುತ್ತಿತ್ತು.‌1995 ರಲ್ಲಿ‌ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2018 ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ಇಬ್ರಾಹಿಂ ಸುತಾರ ಅವರು ಅವರ ನಿಧನಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಬ್ರಾಹಿಂ ಸುತಾರ ಒಬ್ಬ ಪತ್ನಿ, ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ..

ಇದನ್ನು ಒದಿ : https://cnewstv.in/?p=8189

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*