Breaking News

ಬಾಲಕನಿಗೆ ಕಚ್ಚಿದ ಸಾಕು ನಾಯಿ, ಪ್ರಶ್ನೆ ಮಾಡಿದ ಪೋಷಕರ ಮೇಲೆ ನಾಯಿ ಮಾಲೀಕರಿಂದ ಹಲ್ಲೆ..

Cnewstv.in / 04.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಬಾಲಕನಿಗೆ ಕಚ್ಚಿದ ಸಾಕು ನಾಯಿ, ಪ್ರಶ್ನೆ ಮಾಡಿದ ಪೋಷಕರ ಮೇಲೆ ಹಲ್ಲೆ..

ಶಿವಮೊಗ್ಗ : ಸಾಕಿದ ನಾಯಿ 7 ವರ್ಷದ ಬಾಲಕನಿಗೆ ಕಚ್ಚಿದೆ ಇದನ್ನು ಪ್ರಶ್ನೆ ಮಾಡಲು ಹೋದ ಪೋಷಕರ ಮೇಲೆ ಮಾಲೀಕರು ಹಲ್ಲೆ ನಡೆಸಿದ್ದಾರೆ.

ಶಿವಮೊಗ್ಗ ತಾಲೂಕಿನ ಕೊನಗವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಬಾಲಕನಿಗೆ ನಾಯಿ ಕಚ್ಚಿದ್ದನ್ನು, ಪೋಷಕರಾದ ರೂಪಾ ಹಾಗೂ ರುದ್ರೇಶ್ ಪ್ರಶ್ನಿಸಿದಾಗ ನಾಯಿಯ ಮಾಲೀಕರಾದ ಉಮೇಶ್ ಮತ್ತು ಶಿಲ್ಪಾ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

7 ವರ್ಷದ ಬಾಲಕ ಪ್ರಮೋದ್, ತಮ್ಮ ಮನೆಯ ಪಕ್ಕದ ಬೀದಿಯಲ್ಲಿ ನೋಟ್ ಬುಕ್ ತರಲು ಹೋಗಿದ್ದ ವೇಳೆ ಉಮೇಶ್ ಮತ್ತು ಶಿಲ್ಪಾ ಸಾಕಿದ ನಾಯಿ ಕಚ್ಚಿದೆ ಇದನ್ನು ಪ್ರಶ್ನಿಸಲು ಹೋದ ರುದ್ರೇಶ್ ಮತ್ತು ರೂಪ ದಂಪತಿಗಳ ಮೇಲೆ ಇವರು ಹಲ್ಲೆ ಮಾಡಿದ್ದಾರೆ ಎಂದು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನು ಒದಿ : https://cnewstv.in/?p=8182

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*