Cnewstv.in / 03.02.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬಿಎಸ್ ವೈ ಗೆ ಸಾಂತ್ವನ ಹೇಳಿದ ಮಠಾಧೀಶರು.
ಬೆಂಗಳೂರು : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಮೊಮ್ಮಗಳು ಡಾ. ಸೌಂದರ್ಯ ಇತ್ತೀಚೆಗೆ ಮೃತಪಟ್ಟಿದ್ದರು. ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಅನೇಕ ಗಣ್ಯರು ಯಡಿಯೂರಪ್ಪನವರಿಗೆ ಸಾಂತ್ವನವನ್ನು ತಿಳಿಸಿದರು. ಇಂದು ಅನೇಕ ಮಠಾಧೀಶರು ಯಡಿಯೂರಪ್ಪನವರನ್ನು ಭೇಟಿ ಮಾಡಿ ಸಾಂತ್ವನ ತಿಳಿಸಿದರು.
ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು, ಚಿತ್ರದುರ್ಗ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ. ಶಾಂತವೀರ ಮಹಾಸ್ವಾಮಿ, ಶಿವಾನಂದ ಸ್ವಾಮೀಜಿ, ಕೊರಟಗೆರೆ ಬಸವ ಮಹಾಲಿಂಗ ಸ್ವಾಮೀಜಿಯವರು ಸೇರಿದಂತೆ ಹಲವು ಪೂಜ್ಯರು ಭೇಟಿಯಾಗಿ ಸಾಂತ್ವನ ಹೇಳಿದರು.
ಇದನ್ನು ಒದಿ : https://cnewstv.in/?p=8169
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv