Breaking News

ಮೂರು ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ..

Cnewstv.in / 03.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಮೂರು ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ..

ಶಿವಮೊಗ್ಗ : ಮೂರು ವರ್ಷದ ಹೆಣ್ಣು ಮಗುವಿನೊಂದಿಗೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಿಪ್ಪನ್ ಪೇಟೆಯ ಬಿದರಳ್ಳಿ ಗ್ರಾಮದಲ್ಲಿ ನಡೆದಿದೆ.

ವಿವಾಹಿತ ಮಹಿಳೆಯು ತನ್ನ ಮನೆಯ ಮುಂದೆ ಇರುವ ಬಾವಿಗೆ ಅವಳ ಮೂರು ವರ್ಷದ ಮಗು ತವ್ವಿಯೊಂದಿಗೆ ಬೆಳಗಿನ ಜಾವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಶಿಕಾರಿಪುರ ಮೂಲದ ಮಹಿಳೆ 2014 ರಲ್ಲಿ ಲೋಹಿತ್ ಜೊತೆ ಮದುವೆಯಾಗಿ ಬಿದರಳ್ಳಿ ಗ್ರಾಮದಲ್ಲಿ ನೆಲೆಸಿದರು. ಇವರಿಗೆ 6 ವರ್ಷದ ಹಾಗೂ 3 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದು, ಮದುವೆಯ ಹೊಸದರಲ್ಲಿ ಚೆನ್ನಾಗಿ ನೋಡಿಕೊಂಡಿದ್ದವರು ನಂತರದ ದಿನಗಳಲ್ಲಿ ಲೋಹಿತ್‌, ಆತನ ತಂದೆ ನಾಗೇಶಪ್ಪ, ತಾಯಿ ಭಾಗ್ಯಮ್ಮ ಹಾಗೂ ಸಹೋದರಿ ಶೋಭಾ ರವರು ಸೇರಿಕೊಂಡು ಆಕೆಗೆ ಸಣ್ಣಪುಟ್ಟ ವಿಚಾರಕ್ಕೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿರುತ್ತಾರೆ. ಈ ವಿಚಾರವಾಗಿ ಆಕೆಯು ಮನನೊಂದು ತನ್ನ ಮಗುವನ್ನು ವೇಲಿನಿಂದ ತನ್ನ ಸೊಂಟಕ್ಕೆ ಕಟ್ಟಿಕೊಂಡು ಮನೆಯ ಮುಂದೆ ಇರುವ ಭಾವಿಗೆ ಹಾರಿದ್ದು ನೀರಿನಲ್ಲಿ ಮುಳುಗಿ ಇಬ್ಬರೂ ಮೃತ ಪಟ್ಟಿರುತ್ತಾರೆಂದು ದೂರು ನೀಡಲಾಗಿದೆ.

ದೂರಿನ ಮೇರೆಗೆ ರಿಪ್ಪನ್ ಪೇಟೆ ಪೋಲಿಸ್ ಠಾಣೆಯಲ್ಲಿ
ಗುನ್ನೆ ಸಂಖ್ಯೆ 17/2022 ಕಲಂ 498(ಎ), 306 ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇದನ್ನು ಒದಿ : https://cnewstv.in/?p=8166

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*