Cnewstv.in / 03.02.2022 / ಆಂದ್ರಪ್ರದೇಶ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ವಿವಾದದ ಕೇಂದ್ರ ಬಿಂದುವಾಗಿದ್ದ ಜಿನ್ನಾ ಗೋಪುರಕ್ಕೆ ತ್ರಿವರ್ಣ ಬಣ್ಣ..
ಗುಂಟೂರು : ಆಂಧ್ರ ಪ್ರದೇಶದ ವಿವಾದದ ಕೇಂದ್ರ ಬಿಂದುವಾಗಿದ್ದ ಜಿನ್ನಾ ಗೋಪುರಕ್ಕೆ ತ್ರಿವರ್ಣ ಬಣ್ಣ ಬಳಿಯಲಾಗಿದೆ.
ಜನವರಿ 26ರಂದು ಹಿಂದೂ ವಾಹಿನಿ ಸಂಘಟನೆಯ ಯುವಕರು ಜಿನ್ನಾ ಗೋಪುರದ ಬಳಿ ತ್ರಿವರ್ಣ ಧ್ವಜವನ್ನು ಹಾರಿಸಲು ಯತ್ನಿಸಿದರು. ಆಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು ಅಂದಿನಿಂದ ಜಿನ್ನಾ ಗೋಪುರ ವಿವಾದದ ಕೇಂದ್ರ ಬಿಂದುವಾಗಿತ್ತು.
ಇದೆಲ್ಲದರ ನಡುವೆ ಗುಂಟೂರಿನ ವೈ ಎಸ್ ಅರ್ ಕಾಂಗ್ರೆಸ್ ಶಾಸಕ ಮುಸ್ತಾಫಾ ಜಿನ್ನಾ ಗೋಪುರಕ್ಕೆ ತ್ರಿವರ್ಣ ಬಣ್ಣವನ್ನು ಬಳಸಿದ್ದಾರೆ. ಅಲ್ಲದೆ ಗೋಪುರದ ಮುಂದೆ ಧ್ವಜಾರೋಹಣ ಅನುಕೂಲ ಮಾಡಿದ್ದಾರೆ. ಫೆಬ್ರವರಿ 3ರಂದು ಅದರ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಗುವುದು ಎಂದು ತಿಳಿಸಲಾಗಿದೆ.
ಭಾರತಿಯ ಜನತಾ ಪಕ್ಷವು ಗೋಪುರದ ಹೆಸರನ್ನು ಬದಲಾಯಿಸಬೇಕು ಎಂದು ಒತ್ತಾಯಿಸುತ್ತಿತ್ತು.ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ರವರ ಹೆಸರು ಸೇರಿದಂತೆ ಅನೇಕ ಹೆಸರುಗಳನ್ನ ಕೇಳಿಬರುತ್ತಿದ್ದವು.ಹಾಗೂ ವಿವಿಧ ಸಂಘಟನೆಯ ಮನವಿಯ ಮೇರೆಗೆ ಗೋಪುರಕ್ಕೆ ತ್ರಿವರ್ಣ ಬಣ್ಣ ಬಳಿಯಲಾಗಿದ್ದು. ರಾಷ್ಟ್ರ ಧ್ವಜವನ್ನು ಹಾರಿಸಲು ಕಂಬವನ್ನು ನಿರ್ಮಿಸಲಾಗಿದೆ ಎಂದು ಶಾಸಕ ಮಹಮ್ಮದ್ ಮುಸ್ತಫಾ ತಿಳಿಸಿದ್ದಾರೆ.
ಇದನ್ನು ಒದಿ : https://cnewstv.in/?p=8148
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv