Cnewstv.in / 03.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಅಡ್ಡಬಂದ ಹಾವನ್ನು ತಪ್ಪಿಸಲು ಹೋಗಿ ನಾಲೆಗೆ ಉರುಳಿದ ಕಾರು. ಕಾರಿನಲ್ಲಿದ್ದ ಮಹಿಳೆ ಸಾವು.
ಶಿವಮೊಗ್ಗ : ಕಾರಿಗೆ ಅಡ್ಡ ಬಂದ ಹಾವನ್ನು ತಪ್ಪಿಸಲು ಹೋಗಿ ಕಾರು ನಾಲೆಗೆ ಉರುಳಿದ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ಗಾಜನೂರಿನ ನವೋದಯ ಶಾಲೆಯಲ್ಲಿ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಚೇತನ್ ತುಮಕೂರಿನಲ್ಲಿರುವ ಅವರ ತಾಯಿಗೆ ಅನಾರೋಗ್ಯ ಎಂದು ತಿಳಿದು, ತಾಯಿಯ ಆರೋಗ್ಯವನ್ನು ವಿಚಾರಿಸಲು ಹೊರಟಿದ್ದಾರು.
ಗಾಜನೂರು ಬಳಿ ತುಂಗಾನದಿ ಎಡದಂಡೆ ನಾಲೆಯ ಪಕ್ಕದಲ್ಲಿರುವ ರಸ್ತೆಯಲ್ಲಿ ಕಾರಿಗೆ ಅಡ್ಡಲಾಗಿ ರಸ್ತೆಯಲ್ಲಿ ಹಾವು ಬಂದ ಕಾರಣ ತಪ್ಪಿಸಲು ಹೋಗಿ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಕಾರು ಎಡದಂಡೆ ನಾಲೆಯ ನೀರಿಗೆ ಹೋಗಿ ಬಿದ್ದಿದೆ.
ಆ ಸಂದರ್ಭದಲ್ಲಿ ಚೇತನ್ ರವರು ಸಹಾಯಕ್ಕಾಗಿ ಕೂಗಿದ್ದು ಆದರೆ ರಾತ್ರಿಯ ಸಮಯವಾಗಿದ್ದರಿಂದ ಅಕ್ಕ ಪಕ್ಕದಲ್ಲಿ ಯಾರೂ ಇಲ್ಲದ ಕಾರಣ ತಕ್ಷಣ ಇವರ ಸಹಾಯಕ್ಕೆ ಯಾರೂ ಬಾರದೆ ಇದ್ದು ಸುಮಾರು 01 ಗಂಟೆಗಳ ನಂತರ ಗಾಜನೂರಿನ ಗ್ರಾಮಸ್ಥರು ಸ್ಥಳಕ್ಕೆ ಹೋಗಿ ಸಹಾಯ ಮಾಡುವಷ್ಟರಲ್ಲಿ ಸುಷ್ಮಾ ರವರು ನಾಲೆಯ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುತ್ತಾರೆ ನಂತರ ಸುಷ್ಮಾರವರ ಮೃತದೇಹವನ್ನು ಮತ್ತು ಸುರಕ್ಷಿತವಾಗಿ ಚೇತನ್ ಕುಮಾರ್ ರವರನ್ನು ದಡಕ್ಕೆ ತರಲಾಗಿರುತ್ತದೆ.
ಘಟನೆಗೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಇದನ್ನು ಒದಿ : https://cnewstv.in/?p=8146
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv