Breaking News

ಪೊಲೀಸ್ ಜೀಪ್ ನೇ ಕದ್ದ ಭೂಪ..!!! ಅದರೆ ಕದ್ದ ಕಾರಣ ಮಾತ್ರ ವಿಚಿತ್ರ.. ?!!

Cnewstv.in / 03.02.2022 / ಧಾರವಾಡ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಪೊಲೀಸ್ ಜೀಪ್ ನೇ ಕದ್ದ ಭೂಪ..!!! ಅದರೆ ಕದ್ದ ಕಾರಣ ಮಾತ್ರ ವಿಚಿತ್ರ.. ?!!

ಧಾರವಾಡ : ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೂ ಒಂದು ಆಸೆ ಇದ್ದೇ ಇರುತ್ತದೆ. ಅದರೆ ಇಲ್ಲೊಬ್ಬನಿಗೆ ಪೊಲೀಸ್ ಜೀಪ್ ಚಲಾಯಿಸಬೇಕು ಎಂಬ ಆಸೆ. ಅದಕ್ಕಾಗಿ ಆತ ಹೊಂಚು ಹಾಕಿ ಪೊಲೀಸ್ ಠಾಣೆಯ ಮುಂದೆ ನಿಂತಿದ್ದ ಪೊಲೀಸ್ ಜೀಪ್ ನೇ ಕದ್ದಿದ್ದಾನೆ. ಈ ಖದೀಮನ ಕನಸು ಹೇಗೆ ನನಸಾಗಿತ್ತು ?? ನನಸಾದ ನಂತರ ಹೇಗೆ ಕಂಬಿ ಹಿಂದೆ ಸೆರೆಯಾದ ಎಂಬುದರ ಸ್ಟೋರಿ ಇಲ್ಲಿದೆ ನೋಡಿ..

ಹೌದು ಈ ಘಟನೆ ನಡೆದಿರುವುದು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ. ಅಷ್ಟಕ್ಕೂ ಈ ರೀತಿ ಪೋಲಿಸ್ ಜೀಪ್ ಚಲಾಯಿಸಬೇಕು ಎಂಬ ಆಸೆಯನ್ನ ಪಟ್ಟವನ್ನು ನಾಗಪ್ಪ ಹಡಪದ. ಅದಕ್ಕಾಗಿ ಠಾಣೆಯ ಮುಂದೆ ನಿಲ್ಲಿಸಿದ್ದ ಬೊಲೆರೋ ವಾಹನವನ್ನು ಕದ್ದಿದ್ದಾನೆ.

ಅಷ್ಟಕ್ಕೂ ಈ ಭೂಪ ಏಕಾಏಕಿ ಜೀಪ್ ಕದ್ದಿಲ್ಲ ಬದಲಾಗಿ ಸಿನಿಮೀಯ ರೀತಿಯಲ್ಲಿ ಆಗಾಗ ಠಾಣೆಗೆ ಹೋಗಿ ಸಿಬ್ಬಂದಿಗಳೊಂದಿಗೆ ಮಾತನಾಡುತ್ತಿದ್ದ, ವಾತಾವರಣವನ್ನು ಗಮನಿಸುತ್ತಿದ್ದ.‌ ಒಂದು ದಿನ ಪಿಎಸ್ಐ ರಜೆಯಲ್ಲಿದ್ದನ್ನು ಗಮನಿಸಿದ ನಾಗಪ್ಪ ಇದೇ ಸರಿಯಾದ ಸಮಯ ಎಂದು ಬೆಳಿಗ್ಗೆ 4 ಗಂಟೆಗೆ ಜೀಪ್ ತೆಗೆದುಕೊಂಡು ಪರಾರಿಯಾಗಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ಅಣ್ಣಿಗೇರಿ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿಗಳು ನಾಗಪ್ಪನಿಗೆ ಬಲೆ ಬೀಸಿದ್ದಾರೆ. ಬ್ಯಾಡಗಿಯಲ್ಲಿ ಇರುವುದು ಖಚಿತಪಡಿಸಿಕೊಂಡು ಪೊಲೀಸರು ನಾಗಪ್ಪ ನನ್ನ ಬಂಧಿಸಿ ಅಣ್ಣಿಗೇರಿ ಪೊಲೀಸ್ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿದ್ದಾರೆ.

ಒಟ್ಟಿನಲ್ಲಿ ಪೊಲೀಸ್ ಜೀಪ್ ಚಲಾಯಿಸುವ ವಿಚಿತ್ರ ಆಸೆಯಿಂದಾಗಿ ಪೊಲೀಸ್ ಜೀಪನ್ನು ಕದ್ದು ಲಾಕಪ್ ಸೇರಿದ್ದಾನೆ.

ಇದನ್ನು ಒದಿ : https://cnewstv.in/?p=8141

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*