Cnewstv.in / 02.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬಜೆಟ್ 2022 : ಈ ಬಾರಿಯ ಬಜೆಟ್ ಘೋಷಣೆಗಳ ಬೋಗಸ್ – ಎಚ್. ಎಸ್. ಸುಂದರೇಶ್…
ಶಿವಮೊಗ್ಗ : ಈ ಬಾರಿಯ ಕೇಂದ್ರ ಬಜೆಟ್ ಸುಳ್ಳು ಘೋಷಣೆಗಳ ಬೋಗಸ್ ಬಜೆಟ್ ಆಗಿದ್ದು, ಅತ್ಯಂತ ನಿರಾಶದಾಯಕವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದ್ದಾರೆ.
ಯಾವುದೇ ಮುಂದಾಲೋಚನೆ ಇಲ್ಲದೆ ಕೇವಲ
ಘೋಷಣೆಗಳಲ್ಲೇ ಕೇಂದ್ರ ಸರ್ಕಾರ ಇದುವರೆಗೂ ಎಂಟು ಬಜೆಟ್ ಗಳನ್ನು ರಾಷ್ಟ್ರಕ್ಕೆ ನೀಡಿದೆ.ಕಳೆದ ಬಾರಿ
ಮಂಡಿಸಿದ ಬಜೆಟ್‌ನಲ್ಲಿ ಘೋಷಣೆಯಾದ ಯಾವುದೇ ಅಂಶಗಳು ಜಾರಿಗೆ ಬರಲಿಲ್ಲ. ಯೋಜನೆಗೆಳಂತು ಅನುಷ್ಠಾನಗೊಳ್ಳಲೇ ಇಲ್ಲ. ಆದರೂ ಸಹ ಈ ಬಾರಿಯ
ಬಜೆಟ್‌ನಲ್ಲಿ ಸಾಕಷ್ಟು ಘೋಷಣೆಗೆಳನ್ನು ಮಾಡಿದ್ದು, ಇವೆಲ್ಲವೂ ಅನುಷ್ಠಾನಕ್ಕೆ ಬರುವುದಿಲ್ಲ ಎಂದರು.
ಎಲ್ಲಾ ಬಡವರ್ಗದ ಜನರನ್ನು ಮರೆತು ಶ್ರೀಮಂತರ ಪರವಾಗಿ ಕಕೆಲವು ಯೋಜನೆಗಳನ್ನು ಪ್ರಕಟಿಸಿ ಬಜೆಟ್ ಜನವಿರೋಧಿಯಾಗುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.ಇಂತಹ ಕಷ್ಟದ ಸಂದರ್ಭದಲ್ಲಿ ಯಾವ ತೆರಿಗೆ ವಿನಾಯಿತಿ ನೀಡಿಲ್ಲ. ಅದರ ಬದಲು ಕರ್ನಾಟಕಕ್ಕೆ ಸಾಲದ ಹೊರೆ ಹೆಚ್ಚು ಮಾಡಲಾಗಿದೆ. ಇದರ ಪರಿಣಾಮ ರಾಜ್ಯದ ಜನರೇ ಮತ್ತಷ್ಟು ತೆರಿಗೆ ಕಟ್ಟಬೇಕಾಗಬಹುದು. ಬಡವರಿಗೆ ಮಧ್ಯಮ ವರ್ಗ, ಕೂಲಿ ಕಾರ್ಮಿಕ ವರ್ಗ ಇವರನ್ನೆಲ್ಲಾ ಸಂಪೂರ್ಣವಾಗಿ ಮರೆತಿರುವ ಬಜೆಟ್ ಹೇಗೆ ಜನಪರವಾಗುತ್ತದೆ ಎಂದು ಪ್ರಶ್ನಿಸಿದರು.
ಇದನ್ನು ಒದಿ : https://cnewstv.in/?p=8133
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv