Cnewstv.in / 02.02.2022 / ಬೆಂಗಳೂರು/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Accident : ಆಡಿ ಕಾರಿಗೆ ಬಲಿಯಾದ ಲಾರಾ. ಅಂತ್ಯಕ್ರಿಯೆಯಲ್ಲಿ ಕಣ್ಣೀರಿಟ್ಟ ನಟಿ ರಮ್ಯ.
ಬೆಂಗಳೂರು: ಬೀದಿ ನಾಯಿ ಮೇಲೆ ಆಡಿ ಕಾರ್ ಹತ್ತಿಸಿ ಸಾಯಿಸಿದ ಪ್ರಕರಣದಲ್ಲಿ ನಾಯಿ ಲಾರಾ ಪ್ರಾಣಬಿಟ್ಟಿದೆ. ಸುಮ್ಮನಹಳ್ಳಿಯ ಬಿಬಿಎಂಪಿ ಪ್ರಾಣಿಗಳ ಚಿತಾಗಾರಕ್ಕೆ ಶ್ವಾನ ಲಾರಾ ಮೃತದೇಹ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಲಾರಾ ಅಂತ್ಯಕ್ರಿಯೆಗೆ ನಟಿ ರಮ್ಯಾ ಆಗಮಿಸಿದ್ದರು. ಅಂತ್ಯಕ್ರಿಯೆಯಲ್ಲಿ ಹಲವು ಪ್ರಾಣಿ ಪ್ರಿಯರು ಭಾಗಿ ಆಗಿದ್ದಾರೆ.
“ಅಪಘಾತ ಆಗುತ್ತೆ. ಮನುಷ್ಯ ತಪ್ಪು ಮಾಡುತ್ತಾನೆ ಅದು
ಸಹಜ. ಆದರೆ, ಈ ಘಟನೆಯನ್ನು ನಾವು ಗಮನಿಸಿದಾಗ
ಆ ವ್ಯಕ್ತಿ ಬೇಕಂತಲೇ ನಾಯಿ ಮೇಲೆ ಗಾಡಿ ಹತ್ತಿಸಿದ್ದಾನೆ.
ಇದನ್ನು ನೋಡಿ ಸಹಿಸಿಕೊಳ್ಳಲು ಆಗಲಿಲ್ಲ. ನಮ್ಮ
ದೇಶದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ
ಕಾನೂನುಗಳು ಇಲ್ಲದಿರುವುದರಿಂದಲೇ ಇಂತಹ
ಘಟನೆಗಳು ನಡೆಯುತ್ತವೆ”
– ನಟಿ ರಮ್ಯಾ..
ಘಟನೆ ವಿವರ :
ಜನವರಿ 26ರ ಸಂಜೆ 6.15ರ ಸುಮಾರಿಗೆ ರಸ್ತೆ ಬದಿಯಲ್ಲಿ ಮಲಗಿದ್ದ ಬೀದಿ ನಾಯಿ ಮೇಲೆ ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗ ಕಾರು ಹತ್ತಿಸಿದ್ದರು. ಇದನ್ನು ಉದ್ದೇಶಪೂರ್ವಕವಾಗಿ ಹತ್ತಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು.
ಕಾರು ಹತ್ತಿಸಿ ಬೀದಿನಾಯಿ ಸಾವು ಪ್ರಕರಣ ಸಂಬಂಧ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಬಂಧಿತ ಕಾರು ಚಾಲಕ ಆದಿಕೇಶವನನ್ನ ತರಾಟೆಗೆ ತೆಗೆದುಕೊಂಡಿದ್ದರು. ಇದೇ ರೀತಿ ಸ್ಯಾಂಡಲ್ ವುಡ್ ನಟಿ ರಮ್ಯಾ ಸಹ ಆರೋಪಿಯ ಮೃಗೀಯ ವರ್ತನೆಯನ್ನ ಖಂಡಿಸಿದ್ದರು.
ಮಲಗಿದ್ದ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದಿದ್ದ ಕಾರು ಚಾಲಕ ಆದಿಕೇಶವನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ಆದಿಕೇಶವಲು ನಾಯ್ಡು ಮೊಮ್ಮಗ ಆದಿ ಎಂಬಾತನ ವಿರುದ್ಧ ಬದ್ರಿಪ್ರಸಾದ್ ಎಂಬುವರು ದೂರು ನೀಡಿದ್ದರು.
ಜನವರಿ 29 ರಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಬದ್ರಿ ಪ್ರಸಾದ್ ಎಂಬುವರು ದೂರು ನೀಡಿದ್ದರು. ಜ. 31 ರ ಬೆಳಗ್ಗೆ ಘಟನೆ ನಡೆದ ಪಕ್ಕದ ರಸ್ತೆಯ ಚರಂಡಿಯಲ್ಲಿ ಲಾರಾ ಮೃತದೇಹ ಪತ್ತೆಯಾಗಿತ್ತು.
ಇದನ್ನು ಒದಿ : https://cnewstv.in/?p=8111
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv