Cnewstv.in / 01.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಪೊಲೀಸ್ ವಾಹನಕ್ಕೆ ಕಲ್ಲು : 20 ಜನರ ಮೇಲೆ FIR. 9 ಜನ ಅರೆಸ್ಟ್..
ಶಿವಮೊಗ್ಗ : ಯುವಕರ ಗುಂಪೊಂದು ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ
ಬೊಮ್ಮನಕಟ್ಟೆ ಬಡಾವಣೆಯ ಮಾರಿಯಮ್ಮ ದೇವಸ್ಥಾನದ ಬಳಿ ರಾತ್ರಿ 10 ಗಂಟೆಗೆ ಯುವಕರ ಗುಂಪುಗಳ ಮಧ್ಯೆ ಗಲಾಟೆ ಆಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಸ್ಥಳೀಯರು ತಿಳಿಸಿದ್ದಾರೆ.ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರನ್ನು ನೋಡಿದ ಕೂಡಲೇ ಗುಂಪಿನಲ್ಲಿದ್ದ ಕೆಲವರು ಓಡಿಹೋಗಿದ್ದಾರೆ.
ಇನ್ನುಳಿದವರನ್ನು ಪೊಲೀಸರು ವಿಚಾರಣೆ ನಡೆಸುವ ಸಂದರ್ಭದಲ್ಲಿ ಪೊಲೀಸ್ ವಾಹನಕ್ಕೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಪೊಲೀಸ್ ವಾಹನದ ಹಿಂಭಾಗದ ಗಾಜು ಪುಡಿಪುಡಿಯಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಗುಂಪಿನಲ್ಲಿದ್ದ ಯುವಕರು ಪಾನಮತ್ತರಾಗಿದ್ದರು.
ಗಲಾಟೆಯಲ್ಲಿ ಇದ್ದಂತಹ 20 ಜನರ ಗುರುತು ಪತ್ತೆಹಚ್ಚಲಾಗಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹಾಗೂ 9 ಜನರನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ
ಇದನ್ನು ಒದಿ : https://cnewstv.in/?p=8107
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv