Breaking News

ಕೇಂದ್ರ ಬಜೆಟ್ 2022 : ನಿರ್ಮಲಾ ಸೀತಾರಾಮನ್ ಭಾಷಣದ ಹೈಲೈಟ್ಸ್

Cnewstv.in / 01.02.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಕೇಂದ್ರ ಬಜೆಟ್ 2022 : ನಿರ್ಮಲಾ ಸೀತಾರಾಮನ್ ಭಾಷಣದ ಹೈಲೈಟ್ಸ್

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬಜೆಟ್ ಮಂಡಿಸಿದ್ದಾರೆ. ಇದು ನಿರ್ಮಲಾ ಸೀತಾರಾಮ್ ಮಂಡಿಸುತ್ತಿರುವ 4ನೇ ಬಜೆಟ್.
ಸುಮಾರು 1 ಗಂಟೆ 33 ನಿಮಿಷ ಬಜೆಟ್ ಮಂಡನೆ ಮಾಡಿದರು. ಈ ಬಾರಿಯ ಬಜೆಟ್ ಗಾತ್ರ 39.54 ಲಕ್ಷ ಕೋಟಿ ರೂಪಾಯಿ ಆಗಿದೆ. ಈ ಬಾರಿಯ ಬಜೆಟ್ ನಲ್ಲಿ ಆತ್ಮನಿರ್ಭರತೆಗೆ ಹೆಚ್ಚು ಒತ್ತು ನೀಡಲಾಗಿದೆ. ಡಿಜಿಟಲ್ ಆರ್ಥಿಕತೆ ಅಭಿವೃದ್ದಿಗೆ ಕೇಂದ್ರ ಸರ್ಕಾರದ ಗಮನ ನೀಡಿದೆ.

ಕೇಂದ್ರ ಬಜೆಟ್ ನಾ ಹೈಲೈಟ್ಸ್..

*2022ರ ಬಜೆಟ್‌ನಲ್ಲಿ ನಾಗರಿಕರ ಅನುಕೂಲಕ್ಕಾಗಿ 2022-23ರಲ್ಲಿ ಇ-ಪಾಸ್‌ಪೋರ್ಟ್ ನೀಡಲು ಸರ್ಕಾರ ನಿರ್ಧರಿಸಿದೆ.

* ಮುಂದಿನ 3 ವರ್ಷಗಳಲ್ಲಿ ಉತ್ತಮ ದಕ್ಷತೆಯೊಂದಿಗೆ 400 ಹೊಸ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಾಗುವುದು.

* 100 PM ಸ್ಪೀಡ್ ಕಾರ್ಗೋ ಟರ್ಮಿನಲ್ ಅನ್ನು ಮುಂದಿನ 3 ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವುದು.

* ಪ್ರಧಾನ್ ಮಂತ್ರಿ ಗ್ರಾಮ ಸಡಖ್ ಯೋಜನೆಗೆ 190 ಕೋಟಿ ರೂಪಾಯಿ.

*ಪ್ರಧಾನ್ ಮಂತ್ರಿ ಕಿಸಾನ್ ಯೋಜನೆಗೆ 68,000 ಸಾವಿರ ಕೋಟಿ ರೂಪಾಯಿ ಅನುದಾನ.

*ಸಾರಿಗೆ ಮೂಲಭೂತ ಸೌಕರ್ಯಕ್ಕೆ 20 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಕನಿಷ್ಠ ಬೆಂಬಲ ಬೆಲೆ ಘೋಷಣೆಗೆ 2.87 ಲಕ್ಷ ಕೋಟಿ ಅನುದಾನ ಘೋಷಿಸಲಾಯಿತು.

* ಆತ್ಮನಿರ್ಭರ್ ಭಾರತ್ ರೋಜ್ಗಾರ್ ಯೋಜನೆಗೆ 6,400 ಕೋಟಿ ರೂಪಾಯಿ, ಪ್ರಧಾನ್ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಗೆ 10,000 ಕೋಟಿ ರೂಪಾಯಿ.

*ತೆರಿಗೆ ಪಾವತಿಯಲ್ಲಾದ ತಪ್ಪುಗಳನ್ನು ಸರಿಪಡಿಸಲು ಕೇಂದ್ರ ಸರ್ಕಾರ 2 ವರ್ಷ ಅವಕಾಶ ನೀಡಿದೆ. ಐಟಿ ರಿಟರ್ನ್ಸ್ ವೇಳೆ ಆಗಿದ್ದ ತಪ್ಪುಗಳನ್ನು ಸರಿಪಡಿಸಲು ಅವಕಾಶ ಕೊಟ್ಟಿದೆ.

* ದೂರ ಸಂಪರ್ಕ ಇಲಾಖೆಗೆ 10,540.82 ಕೋಟಿ ರೂಪಾಯಿ.

* ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಗೆ 107715.38 ಕೋಟಿ ರೂಪಾಯಿ.

* ಎಮೆರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಂ (ಇಸಿಎಲ್‌ಜಿಎಸ್)ನ್ನು ಮಾರ್ಚ್ 2023 ರವರೆಗೆ ವಿಸ್ತರಿಸಲಾಗುವುದು. ಗ್ಯಾರಂಟಿ ಕವರ್ ಅನ್ನು 50,000 ಕೋಟಿಯಿಂದ 5 ಲಕ್ಷ ಕೋಟಿಗೆ ಹೆಚ್ಚಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.

* ಜಲ್ ಜೀವನ್ ಯೋಜನೆಗೆ 60,000 ಕೋಟಿ ರೂಪಾಯಿ ಮೀಸಲಿಡಲಾಗಿದೆ.

*ರಾಷ್ಟ್ರೀಯ ಶಿಕ್ಷಣ ಯೋಜನೆಗೆ 39,553 ಕೋಟಿ ರೂಪಾಯಿ.

* ಕೃಷಿ ಮತ್ತು ರೈತರ ಅಭಿವೃದ್ಧಿಗೆ 132513.62 ಕೋಟಿ ರೂಪಾಯಿ.

* ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ 138203.63 ಕೋಟಿ ರೂಪಾಯಿ, ರೈಲ್ವೆ ಸಚಿವಾಲಯಕ್ಕೆ 140367.13 ಕೋಟಿ, ಗೃಹ ವ್ಯವಹಾರಗಳ ಸಚಿವಾಲಯಕ್ಕೆ 185776.55 ಕೋಟಿ, ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯಕ್ಕೆ 199107.71 ಕೋಟಿ ರೂಪಾಯಿ ಅನುದಾನ.

* ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ 217684.46 ಕೋಟಿ ಹಾಗೂ ರಕ್ಷಣಾ ಸಚಿವಾಲಯಕ್ಕೆ 525166.16 ಕೋಟಿ ಅನುದಾನ.

ಇದನ್ನು ಒದಿ : https://cnewstv.in/?p=8095

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*