Cnewstv.in / 01.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇಂದ ನೂತನ ಸಾಮಾನ್ಯ ಸೇವಾ ಕೇಂದ್ರ ಉದ್ಘಾಟನೆ
ಶಿವಮೊಗ್ಗ : ನಗರದ ಹೊಸಮನೆ ಬಡಾವಣೆಯ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯ ವತಿಯಿಂದ ಸಾಮಾನ್ಯ ಸೇವಾ ಕೇಂದ್ರವನ್ನು ಪ್ರಾರಂಭಿಸುತ್ತಿದ್ದು ಈ ಕಚೇರಿಯ ಉದ್ಘಾಟನೆಯನ್ನು ಬಡಾವಣೆಯ ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ರವರು ದೀಪಾ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು
ನಂತರ ಮಾತನಾಡಿದ ರೇಖಾ ರಂಗನಾಥ್ ರವರು ಧರ್ಮಸ್ಥಳ ಸಂಸ್ಥೆಯು ಪೂಜ್ಯ ಶ್ರೀ ಡಾಕ್ಟರ್ ವೀರೇಂದ್ರ ಹೆಗ್ಗಡೆ ಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಎಲ್ಲಾ ಬಾಂಧವರು ಉತ್ತಮ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಸರ್ಕಾರದ ಕೊಂಡಿಯಾಗಿ ಸಂಸ್ಥೆಯು ಜನಪರವಾಗಿ ಸೇವೆ ಸಲ್ಲಿಸುತ್ತಿದೆ ನಮ್ಮ ಬಡಾವಣೆಯ ನಾಗರಿಕರು ಈ ಸೇವಾಕೇಂದ್ರದ ಸದುಪಯೋಗಪಡಿಸಿಕೊಳ್ಳಬೇಕೆಂದು ಎಂದು ಹೇಳಿದರು
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ರಾದ ಶ್ರೀಮತಿ ಗೀತಾ , ತಾಲೂಕು ಯೋಜನಾಧಿಕಾರಿ ಶ್ರೀಮತಿ ರೂಪಾಆದರ್ಶ, ವಲಯದ ಮೇಲ್ವಿಚಾರಕರು ಪ್ರಶಾಂತ್ ಹಾಗೂ ಸೇವಾ ಪ್ರತಿನಿಧಿಗ ಗಳು ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು
ಇದನ್ನು ಒದಿ : https://cnewstv.in/?p=8081
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments