Breaking News

ಹುಲಿ-ಸಿಂಹಧಾಮದಲ್ಲಿ, ಸಿಂಹಗಳ ನಡುವೆ ಕಾದಾಟ, ಸಿಂಹಿಣಿ ಸಾವು.

Cnewstv.in / 01.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಹುಲಿ-ಸಿಂಹಧಾಮದಲ್ಲಿ, ಸಿಂಹಗಳ ನಡುವೆ ಕಾದಾಟ, ಸಿಂಹಿಣಿ ಸಾವು.

ಶಿವಮೊಗ್ಗ : ತಾವರೆಕೊಪ್ಪ ದಲ್ಲಿರುವ ಹುಲಿ-ಸಿಂಹಧಾಮದಲ್ಲಿ ಸಿಂಹಗಳ ನಡುವೆ ಕಾದಾಟ ವಾಗಿದ್ದು ಸಿಂಹಿಣಿ ಮೃತಪಟ್ಟಿದೆ.

10 ವರ್ಷದ ಸಿಂಹಿನಿ ಮಾನ್ಯ ಹಾಗೂ 16 ವರ್ಷದ ಯಶವಂತ ಎಂಬ ಗಂಡು ಸಿಂಹವನ್ನು ಒಂದೇ ಎನ್ ಕ್ಲೌಸರ್ ನಲ್ಲಿ ಬಿಡಲಾಗಿತ್ತು. ಎರಡರ ನಡುವೆ ಜಗಳವಾಗಿತ್ತು. ನಂತರ ಎರಡು ಸಿಂಹಗಳನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು.‌ ಜಗಳದಿಂದ ತೀವ್ರವಾಗಿ ಗಾಯಗೊಂಡಿದ್ದ ಮನ್ಯ ಸಿಂಹಿನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

2011 ರಲ್ಲಿ‌ ಮಾನ್ಯ ಸಿಂಹಿಣಿ ಹಾಗೂ ಮೂರು ಸಿಂಹಗಳನ್ನು ಮೈಸೂರು ಮೃಗಾಲಯದಿಂದ ಶಿವಮೊಗ್ಗದ ಸಫಾರಿಗೆ ತರಲಾಗಿತ್ತು. ಇದುವರೆಗೂ ಮಾನ್ಯ ಯಾವುದೇ ಮರಿಗಳಿಗೆ ಜನ್ಮ ನೀಡಿರಲ್ಲಿಲ್ಲ. ಮೃತಪಟ್ಟ ಹೆಣ್ಣು ಸಿಂಹಿಣಿಯನ್ನು ಕಾನೂನು ರೀತ್ಯ ಮರಣೋತ್ತರ ಪರೀಕ್ಷೆಯನ್ನು ಜರುಗಿಸಿ, ಸಿಂಹಿಣಿಯ ದೇಹವನ್ನು ವಿಲೇ ಮಾಡಲಾಯಿತು

ಇದನ್ನು ಒದಿ : https://cnewstv.in/?p=8081

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*