Cnewstv.in / 01.02.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಸ್ಪಾರ್ಟ್ ಆಪ್ ರಾಜಧಾನಿ ದೆಹಲಿ : ರಾಜಧಾನಿ ಬೆಂಗಳೂರನ್ನು ಹಿಂದಿಕ್ಕಿದ ರಾಷ್ಟ್ರರಾಜಧಾನಿ ದೆಹಲಿ.
ನವದೆಹಲಿ : ಸ್ಮಾರ್ಟ್ ಅಪ್ ಗಳ ರಾಜಧಾನಿಯಾಗಿದ್ದ ಬೆಂಗಳೂರನ್ನು ರಾಷ್ಟ್ರರಾಜಧಾನಿ ದೆಹಲಿ ಹಿಂದಿಕ್ಕಿದೆ.
2021-22ರ ಆರ್ಥಿಕ ಸಮೀಕ್ಷಾ ವರದಿ ಪ್ರಕಾರ, ಏಪ್ರಿಲ್ 2019 ಮತ್ತು ಡಿಸೆಂಬರ್ 2021ರ ನಡುವೆ ಬೆಂಗಳೂರಿನ 4,145 ಸ್ಟಾರ್ಟ್ ಅಪ್ ಗಳೊಂದಿಗೆ ಹೋಲಿಸಿದಾಗ ದೆಹಲಿಯಲ್ಲಿ ಗುರುತಿಸಲಾದ ಸುಮಾರು 5 ಸಾವಿರ ಸ್ಟಾರ್ಟ್ ಆಪ್ ಗಳು ಸೇರಿವೆ.
ಭಾರತದ ಆರ್ಥಿಕ ಸರ್ವೇ ಪ್ರಕಾರ ಒಟ್ಟು 11, 308 ಸ್ಟಾರ್ಟ್ ಅಪ್ ಗಳೊಂದಿಗೆ ಮಹಾರಾಷ್ಟ್ರ ಹೆಚ್ಚಿನ ಸಂಖ್ಯೆಯ ಮಾನ್ಯತೆಗೊಂಡ ಸ್ಟಾರ್ಟ್ ಅಪ್ ಗಳನ್ನು ಹೊಂದಿದೆ. ಜನವರಿ 10, 2022ರ ಹೊತ್ತಿಗೆ ಸುಮಾರು 61, 400 ಸ್ಟಾರ್ಟ್ ಅಪ್ ಗಳನ್ನು ದೇಶದಲ್ಲಿ ಗುರುತಿಸಲಾಗಿದೆ ಎಂದು ಹೇಳಲಾಗಿದೆ. 2021ರಲ್ಲಿ 44ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳು ಯೂನಿಕಾರ್ನ್ ಆಗಿ ಬದಲಾದ್ದರಿಂದ ಅಮೆರಿಕ, ಚೀನಾ ನಂತರ ಭಾರತ ಯೂನಿಕಾರ್ನ್ ಗಳ ಸಂಖ್ಯೆಯಲ್ಲಿ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮುವಲ್ಲಿ ನೆರವಾಯಿತು.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬಾಹ್ಯಾಕಾಶ ವಲಯದಲ್ಲಿ ಸ್ಟಾರ್ಟ್ ಅಪ್ ಗಳ ಸಂಖ್ಯೆ ಹೆಚ್ಚಾಗಿದೆ. ಸುಮಾರು 75 ಸ್ಟಾರ್ಟ್ ಅಪ್ ಗಳು ಬಾಹ್ಯಾಕಾಶ ತಂತ್ರಜ್ಞಾನ ವರ್ಗದಲ್ಲಿವೆ. 2021ರಲ್ಲಿ 555 ಜಿಲ್ಲೆಗಳು ಕನಿಷ್ಠ ಒಂದು ಸ್ಟಾರ್ಟ್ ಅಪ್ ಹೊಂದಿವೆ. ಇದಕ್ಕೆ ಬದಲಿಗೆ 2016-17ರಲ್ಲಿ ಕೇವಲ 121 ಜಿಲ್ಲೆಗಳು ಕನಿಷ್ಠ ಒಂದು ಹೊಸ ಸ್ಟಾರ್ಟ್ ಆಪ್ ಗಳನ್ನು ಹೊಂದಿದ್ದವು.
2016-17ರಲ್ಲಿ 733 ಸ್ಟಾರ್ಟ್ ಅಪ್ ಗಳಿಂದ 2021-22ರ ವೇಳೆಗೆ ದೇಶದಲ್ಲಿ ಸುಮಾರು 14,000 ಹೊಸ ಸ್ಟಾರ್ಟ್ ಗಳು ಬೆಳವಣಿಗೆಯಾಗುತ್ತಿವೆ.
ಇದನ್ನು ಒದಿ : https://cnewstv.in/?p=8081
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv