Cnewstv.in / 31.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ದೇಶದ ಎಲ್ಲಾ ರಾಜ್ಯಗಳ ಪೊಲೀಸ್ ವ್ಯವಸ್ಥೆಯನ್ನು ಭಾರತೀಯ ಭೂ ಸೇನೆ ವಾಯು ಸೇನೆ ನೌಕಾಸೇನೆ
ರೀತಿ ಕೇಂದ್ರ ಸರ್ಕಾರದ ವ್ಯಾಪ್ತಿಗೊಳಪಡಿಸಿ.
ಶಿವಮೊಗ್ಗ : ದೇಶದ ಎಲ್ಲಾ ರಾಜ್ಯಗಳ ಪೊಲೀಸ್ ವ್ಯವಸ್ಥೆಯನ್ನು ಭಾರತೀಯ ಭೂ ಸೇನೆ ವಾಯು ಸೇನೆ ನೌಕಾಸೇನೆ ರೀತಿ ಕೇಂದ್ರ ಸರ್ಕಾರದ ವ್ಯಾಪ್ತಿಗೊಳಪಡಿಸಿ ಎಂದು ಜನಾತದಳ (ಸಂಯುಕ್ತ) ಕರ್ನಾಟಕದ ರಾಜ್ಯಕಾರ್ಯದರ್ಶಿಯಾದ ಶಶಿಕುಮಾರ್.ಎಸ್.ಗೌಡರವರು ವಿನಂತಿಸಿದ್ದಾರೆ.
ದೇಶದೊಳಗೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪೊಲೀಸ್ ಪಡೆಗಳನ್ನು ರಾಜ್ಯ ಸರ್ಕಾರದ ಅಧೀನದಿಂದ ಕೇಂದ್ರ ಸರ್ಕಾರದ ಅಧೀನಕ್ಕೊಳಪಡಿಸಿದರೆ ದೇಶದೊಳಗೆ ನಡೆಯುತ್ತಿರುವ ಅಕ್ರಮಗಳು ಭ್ರಷ್ಟಾಚಾರ ಕೊಲೆ ಸುಲಿಗೆ ಅತ್ಯಾಚಾರ ಕಿಡ್ನಾಪ್ ಸ್ಮಗ್ಲಿಂಗ್ ಕಳ್ಳತನ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಮತ್ತು ಮಾರಾಟ ಮಾನವ ಕಳ್ಳಸಾಗಾಣಿಕೆ ವೇಶ್ಯಾವಾಟಿಕೆ ದಂದೆ ಹೈಟೆಕ್ ಗ್ಲಾಬಿಂಗ್ ದಂಧ ದೇಶ ದ್ರೋಹ ಕಾಡಿಸಂ ರಿಯಲ್ ಎಸ್ಟೇಟ್ ಮಾಫಿಯಾ, ನಕಲಿ ನೋಟ್ ಹಾವಳಿ, ಆನ್ಲೈನ್ ದೋಖಾ ಹವಾಲಾ ದಂಧೆ ಕಪ್ಪು ಹಣವನ್ನು ಬಿಳಿ ಹಣ ಮಾಡುವಂತ ದಂಧೆ ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಹಾಳು ಮಾಡಿ ಕೋಮು ಗಲಭೆ ಸೃಷ್ಟಿ ಮಾಡಿ ದೇಶದಲ್ಲಿ ಶಾಂತಿ ಕದಡುವಂತಹ ಸಂಚು ಕೋರರು ಹಾಗೂ ಚೈನ್ ಲಿಂಕ್ ದೋಖಾ ಸುಪಾರಿ ಕಿಲ್ಲರ್ ಗಳು ಕ್ರಿಕೆಟ್ ಬೆಟ್ಟಿಂಗ್ ಲ್ಯಾಂಡ್ ಮಾಫಿಯಾ ಮೆಡಿಕಲ್ ಮಾಫಿಯಾ ಹಾಗೂ ಈ ಎಲ್ಲ ಮೇಲ್ಕಂಡ ದಂಧ ಗಳಿಗೆ ಆಯಾ ರಾಜ್ಯದಲ್ಲಿರುವ ಕೆಲವು ಪ್ರಭಾವಿರಾಜಕಾರಣಿಗಳ ಅಧಿಕಾರದಲ್ಲಿರುವ ಹಾಗು ಬಂಡವಾಳ ಶಾಹಿಗಳ ಕೃಪಾ ಕಟಾಕ್ಷ ಆಶೀರ್ವಾದ ವಿದ್ದು ಇಂತಹವರ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಲು ಮುಂದಾದರೆ ಪ್ರಭಾವಿ ಭ್ರಷ್ಟ ರಾಜಕಾರಣಿಗಳ ಹಸ್ತ ಕ್ಷೇಪದಿಂದ ಕಾನೂನು ರೀತಿ ಏನು ಮಾಡದೇ ಅಸಹಾಯಕ ಸ್ಥಿತಿಯಲ್ಲಿ ಪೋಲೀಸರ ಪರಿಸ್ಥಿತಿಯಿದೆ ಕೆಲವು ಭಾರಿ ಪೊಲೀಸರು ತಪ್ಪಿತಸ್ಥರ ಭ್ರಷ್ಟ ರಾಜಕಾರಣಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಕಾರ್ಯನ್ಮುಖರಾದರೆ ಅಂತಹ ಪೊಲೀಸರಿಗೆ ಸಸ್ಪೆನ್ಸ್ , ಡಿಸ್ಮಿಸ್ ಮಾಡಿ ಅಥವಾ
ವರ್ಗಾವಣೆ ಮಾಡಿ ಪೋಲೀಸರ ಆತ್ಮ ವಿಶ್ವಾಸ ಹಾಗೂ ನೈತಿಕ ಸೈರ್ಯ ಕುಂದಿಸುವಂತಹ ಕೆಲಸಗಳು ಸ್ವತಂತ್ರ
ಬಂದಾಗಿನಿಂದ ಇಲ್ಲಿಯವರೆಗೂ ದೇಶದಲ್ಲಿ ಪ್ರಾಮಾಣಿಕ ಪೋಲೀಸರ ವಿರುದ್ಧ ನಡೆದು ಕೊಂಡು ಬಂದಿದೆ ಅದರಿಂದ ಮಾನ್ಯ ರಾದ ತಾವುಗಳು ದೇಶದಲ್ಲಿರುವ ಎಲ್ಲಾ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೊಲೀಸ್ ಪಡೆಗಳನ್ನು ನಮ್ಮ ಹಾಗೂ ದೇಶದಲ್ಲಿರುವ ಭೂ ಸೇನೆ ವಾಯುಸೇನೆ ನೌಕಾಸೇನೆ ರೀತಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡಿಸಿದರೆ ದೇಶದಲ್ಲಿ
ಅಹಿತಕರ ಘಟನೆಗಳು ಕಡಿಮೆಯಾಗುತ್ತದೆ.
ಶೇ 90 ರಷ್ಟು ಭ್ರಷ್ಟಾಚಾರ ಕೊಲೆ ಸುಲಿಗೆಯಂತಹ
ದೇಶದಲ್ಲಿರುವ ಎಲ್ಲಾ ಪೊಲೀಸರಿಗೂ ಏಕರೂಪ ವಸ್ತ್ರ ಹಾಗೂ ಏಕರೂಪ ಸಂಬಳ ಹಾಗೂ ಏಕರೂಪ ವರ್ಗಾವಣೆ, ಏಕರೂಪ ಬಡ್ತಿ ಇತ್ಯಾದಿಗಳು ಒಂದೇ ರೀತಿ ಇದ್ದಾಗ ಪೊಲೀಸರು ಆತ್ಮ ವಿಶ್ವಾಸದಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಆದರಿಂದ ಮಾನ್ಯ ರಾದ ತಾವುಗಳು ದೇಶದಲ್ಲಿರುವ ಎಲ್ಲಾ ರಾಜ್ಯ ಸರ್ಕಾರದ
ಅಧೀನದಲ್ಲಿರುವ ಪೊಲೀಸ್ ಪಡೆಗಳನ್ನು ನಮ್ಮ ದೇಶದಲ್ಲಿರುವ ಭೂ ಸೇನೆ ವಾಯುಸೇನೆ ನೌಕಾಸೇನ ರೀತಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡಿಸಿ ಪೊಲೀಸರಿಗೆ ಆತ್ಮ ಸೈರ್ಯ ತುಂಬ ಬೇಕೆಂದು ತಮ್ಮಲ್ಲಿ ವಿನಯ ಪೂರ್ವಕವಾಗಿ ಕೇಳಿಕೊಳ್ಳುತ್ತೇವೆ.
ಇದನ್ನು ಒದಿ : https://cnewstv.in/?p=8064
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv