Breaking News

ಸೇವೆ ಮಾಡಲು ಅವಕಾಶ ಸಿಕ್ಕಾಗ ಅಧಿಕಾರವನ್ನು ಸದ್ಬಳಕೆ ಆಗಬೇಕು : ಆದಿಚುಂಚನಗಿರಿ ಶ್ರೀ ಪ್ರಸನ್ನನಾಥಸ್ವಾಮೀಜಿ

Cnewstv.in / 29.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಸೇವೆ ಮಾಡಲು ಅವಕಾಶ ಸಿಕ್ಕಾಗ ಅಧಿಕಾರವನ್ನು ಸದ್ಬಳಕೆ ಆಗಬೇಕು : ಆದಿಚುಂಚನಗಿರಿ ಶ್ರೀ ಪ್ರಸನ್ನನಾಥಸ್ವಾಮೀಜಿ

“ಸೇವೆಗೆ ಅವಕಾಶ ದೊರೆತಾಗ, ಅಧಿಕಾರ ಸದ್ಬಳಕೆಯಾಗಬೇಕು ಅದೇ ಮಾನವನ ಸಾಧನೆಯ ದಾರಿ” ಎಂದು ಆದಿಚುಂಚನಗಿರಿ ಶ್ರೀ ಪ್ರಸನ್ನನಾಥಸ್ವಾಮೀಜಿ ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಚುನಾಯಿತ ನೂತನ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ನಿದೇಶಕರುಗಳನ್ನು ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿಯವರು ಶ್ರೀಮಠಕ್ಕೆ ಆಹ್ವಾನಿಸಿ, ಸನ್ಮಾನಿಸಿ, ಅಭಿನಂದಿಸಿ, ಆಶಿರ್ವದಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಶಿವಮೊಗ್ಗ ನಗರದಲ್ಲಿ ಅನೇಕ ವರ್ಷಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಹಲವಾರು ಉತ್ತಮ ಸೇವಾ ಕಾರ್ಯಗಳನ್ನು ಮಾಡುತ್ತಾ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಅನೇಕ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ತಮ್ಮಗಳ ಅಧಿಕಾರದ ಅವಧಿಯಲ್ಲಿ ಉತ್ತಮ ಕೆಲಸ ಕಾರ್ಯಗಳು ಆಗಲಿ ಎಂದು ಹಾರೈಸಿ, ಅಧಿಕಾರ ಶಾಸ್ವತ ಅಲ್ಲ. ಸೇವೆ ಮಾಡಲು ಅವಕಾಶ ಸಿಕ್ಕಾಗ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕು ಅದೇ ಮಾನವನು ದೇವರಿಗೆ ಸಲ್ಲಿಸುವ ದೊಡ್ಡಕಾಣಿಕೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಉಪಾಧ್ಯಕ್ಷ ಬಿ. ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ, ಸಹ-ಕಾರ್ಯದರ್ಶಿ ಜಿ. ವಿಜಯಕುಮಾರ್, ನಿದೇಶಕರುಗಳಾದ ಜಗದೀಶ್ ಮಾತನವರ್, ಪ್ರದೀಪ್ ವಿ. ಎಲಿ, ಗಣೇಶ ಎಂ. ಅಂಗಡಿ ಉಪಸ್ಥಿತರಿದ್ದು ಶ್ರೀಮಠದ ಪ್ರಸನ್ನನಾಥ ಸ್ವಾಮೀಜಿಯವರಿಗೆ ಗೌರವ ಸಮರ್ಪಣೆ ನೀಡಿ ಆಶಿರ್ವಾದ ಪಡೆದರು.

ಇದನ್ನು ಒದಿ : https://cnewstv.in/?p=8031

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*