Cnewstv.in / 29.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ತಮಟೆ ಬಾರಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
ಶಿವಮೊಗ್ಗ : ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಇಂದು ತಮಟೆ ಬಾರಿಸಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ರಾಯಚೂರು ಜಿಲ್ಲಾ ಕೋರ್ಟ್ ಆವರಣದಲ್ಲಿ 73 ನೇ ಸಂವಿಧಾನೋತ್ಸವ ದಿನ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಫೋಟೋ ತೆಗೆದರೆ ಮಾತ್ರ ನಾನು ದ್ವಜಾರೋಹಣ ಮಾಡುತ್ತೇನೆ ಎಂದು ಹೇಳಿ ಅಂಬೇಡ್ಕರ್ ರವರಿಗೆ
ಅವಮಾನ ಮಾಡಿರುವ ರಾಯಚೂರು ಜಿಲ್ಲಾ ನ್ಯಾಯಾದೀಶರಾದ ಮಲ್ಲಿಜಿರ್ಜುನ ಗೌಡ ಇವರನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ಇಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಯ ಅವರಣದಲ್ಲಿ ಪ್ರತಿಭಟನಾ ಧರಣಿ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ದೇಶದ ಉದ್ದಗಲಕ್ಕೂ 73 ನೇ ಸಂವಿಧಾನೋತ್ಸವ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ರಾಯಚೂರಿನ ನ್ಯಾಯಾಧೀಶರು ಅಂಬೇಡ್ಕರವರನ್ನು ದಿಕ್ಕರಿಸಿದ್ದಾರೆ. ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುತ್ತೇವೆಂಬ ಪ್ರತಿಜ್ಞೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಸಂವಿಧಾನದ ಅಡಿಯಲ್ಲಿಯೇ ನ್ಯಾಯಾದೀಶರಾಗಿ ಸ್ಥಾನಪಡೆದು ಮತ್ತು ಸಂವಿಧಾನದಡಿಯಲ್ಲಿ ನ್ಯಾಯದಾನ ಮಾಡುವ ನ್ಯಾಯಾದೀಶರೆ ಅವಿದ್ಯಾವಂತನಂತೆ, ಅವಿವೇಕಿಯಂತೆ ನಡೆದುಕೊಂಡು ನ್ಯಾಯಾಂಗದ ಭದ್ರ ಬುನಾದಿಯಾದ
ಸಂವಿಧಾನದ ನಿರ್ಮಾತೃ ಅಂಬೇಡ್ಕರ್ ರವರನ್ನು ಜಿಲ್ಲಾ ನ್ಯಾಯಾದೀಶರಾದ ಮಲ್ಲಿಕಾರ್ಜುನಗೌಡ ರವರು ಅವಮಾನಿಸಿದ್ದಾರೆ ಕೂಡಲೇ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಿಎಸ್ಎಸ್ ರಾಜ್ಯ ಸಂಚಾಲಕರಾದ ಎಮ್.ಗುರುಮೂರ್ತಿ, ಶಿವಬಸಪ್ಪ, ಕರಿಯಪ್ಪ ಅತ್ತಿಗುಂದ, ಹರಿಗೆ ರವಿ, ರಮೇಶ್ ಚಿಕ್ಕಮರಡಿ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನು ಒದಿ : https://cnewstv.in/?p=8031
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv