Breaking News

ಬಿ.ಎಸ್.ವೈ : ಸೌಂದರ್ಯ ಪಾರ್ಥಿವ ಶರೀರ ಕುಟುಂಬಸ್ಥರಿಗೆ ಹಸ್ತಾಂತರ. ಇಂದು ಸಂಜೆಯೇ ಅಂತ್ಯಸಂಸ್ಕಾರ.

Cnewstv.in / 28.01.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಡಾ. ಸೌಂದರ್ಯ ಪಾರ್ಥಿವ ಶರೀರ ಕುಟುಂಬಸ್ಥರಿಗೆ ಹಸ್ತಾಂತರ. ಇಂದು ಸಂಜೆಯೇ ಅಂತ್ಯಸಂಸ್ಕಾರ.

ಬೆಂಗಳೂರು : ಬಿಎಸ್ ವೈ ಮೊಮ್ಮಗಳು ಸೌಂದರ್ಯ ವಸಂತನಗರದ ತಮ್ಮ ಪ್ಲಾಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿ (ರೇಡಿಯಲಾಜಿಸ್ಟ್) ಸೇವೆ ಸಲ್ಲಿಸುತ್ತಿದ್ದರು ಸೌಂದರ್ಯ.
2018ರಲ್ಲಿ ಡಾ. ನೀರಜ್ ಜೊತೆ ವಿವಾಹವಾಗಿದ್ದರು.

9 ತಿಂಗಳ ಗಂಡು ಮಗುವನ್ನು ಪಕ್ಕದ ರೂಮಿನಲ್ಲಿ ಬಿಟ್ಟು ಇನ್ನೊಂದು ರೂಮಿನಲ್ಲಿ ಆತ್ಮಹತ್ಯೆಗೆ ಸೌಂದರ್ಯ ಶರಣಾಗಿದ್ದಾರೆ. ಇತ್ತೀಚೆಗೆ ಸೌಂದರ್ಯ ಮಾನಸಿಕ ಖ್ನಿನತೆಗೆ ಒಳಗಾಗಿದ್ದರು. ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗುತ್ತದೆ.

ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದೆ. ಕೆಲವೇ ಕ್ಷಣದಲ್ಲಿ ಸಂಬಂಧಿಕರಿಗೆ ಮೃತದೇಹವನ್ನ ಹಸ್ತಾಂತರಿಸಲಾಗುವುದು. ಇಂದು ಸಂಜೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಹೇಳಲಾಗುತ್ತಿದೆ.

ಶಿವಗಂಗೆ ರುದ್ರಮುನಿ ಶಿವಾಚಾರ್ಯ ಶ್ರೀಗಳ ಮಾರ್ಗದರ್ಶನದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಗುವುದು. ಅಬ್ಬಿಗೆರೆ ನೀರಜ್ ನಿವಾಸದ ಬಳಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ದತೆ ಮಾಡಲಾಗುತ್ತಿದೆ.

ಇದನ್ನು ಒದಿ : https://cnewstv.in/?p=8010

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*