Breaking News

ಜೈಲಿನಲ್ಲಿದ್ದುಕೊಂಡೇ ಉದ್ಯಮಿಗೆ ಬೆದರಿಕೆ ಕರೆ ಮಾಡಿದ ರೌಡಿಶೀಟರ್.

Cnewstv.in / 27.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಜೈಲಿನಲ್ಲಿದ್ದುಕೊಂಡೇ ಉದ್ಯಮಿಗೆ ಬೆದರಿಕೆ ಕರೆ ಮಾಡಿದ ರೌಡಿಶೀಟರ್.

ಶಿವಮೊಗ್ಗ : ಜೈಲಿನಲ್ಲಿದ್ದುಕೊಂಡೇ ರೌಡಿಶೀಟರ್ ಒಬ್ಬ ಉದ್ಯಮಿಗೆ ಬೆದರಿಕೆ ಕರೆ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಜಮೀರಾ ಬಚ್ಚನ್ ಎಂಬ ರೌಡಿಶೀಟರ್ ದರೋಡೆ ಕಿಡ್ನಾಪ್ ಸೇರಿದಂತೆ ವಿವಿಧ ಪ್ರಕರಣಗಳ ಅಡಿಯಲ್ಲಿ ಅರೆಸ್ಟ್ ಅಗಿ ಜೈಲಿನಲ್ಲಿದ್ದ. ಜೈಲಿನಲ್ಲಿದ್ದುಕೊಂಡೇ ಆರೋಪಿಯು ಕಳೆದ ಜನವರಿ 23ರಂದು ಮಾದಾರಿಪಾಳ್ಯದ ನಾಸಿರ್ ಖಾನ್ ಎಂಬ ಉದ್ಯಮಿಗೆ ಬೆದರಿಕೆ ಕರೆ ಮಾಡಿದ್ದಾನೆ.

ಇಂದು ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ಸಿಇಎನ್ ಠಾಣೆ ಸಿಪಿಐ ಹಾಗೂ ತುಂಗಾ ನಗರ ಠಾಣೆ ಪ್ರಭಾರ K T ಗುರುರಾಜ್ ನೇತೃತ್ವದ ತಂಡ ದಾಳಿ ನಡೆಸಿದ್ದಾರೆ. ದಾಳಿ ವೇಳೆ ರೌಡಿಶೀಟರ್ ಜವೀರಾ ಬಚ್ಚನ್ ಬಳಿ ಇದ್ದ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ನಂತರ ಬಚ್ಚನ್ ನನ್ನ ಪ್ರತ್ಯೇಕ ಸೆಲ್ ನಲ್ಲಿ ಇಟ್ಡು ನಿಗಾವಹಿಸುವಂತೆ ಬಂಧಿಖಾನೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕಳೆದ ಅಕ್ಟೋಬರ್ ನಲ್ಲಿ ಬಚ್ಚನ್ ಉದ್ಯಮಿಗೆ ಬೆದರಿಕೆ ಕರೆ ಮಾಡಿ ಕೇಳಿದಷ್ಟು ಹಣ ನೀಡದೆ ಇದ್ದಾರೆ, ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಅಲ್ಲದೆ ಉದ್ಯಮಿಯ ಮನೆಯ ಬಳಿ ಬೆಂಬಲಿಗರನ್ನ ಕಳುಹಿಸಿ ಗಲಾಟೆ ಮಾಡಿಸಿದ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ಇದನ್ನು ಒದಿ : https://cnewstv.in/?p=7976

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*