Breaking News

ನಾನು ಕೇವಲ ಸೇತುವೆಯಾಗಿ ಕಾರ್ಯ ನಿರ್ವಹಿಸಿದ್ದೇನೆ, ಮತ್ತೂರು ಗ್ರಾಮವು ನಮ್ಮ ದೇಶದ ಆಸ್ತಿ : ಬಿ. ವೈ. ರಾಘವೇಂದ್ರ

Cnewstv.in / 27.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ನಾನು ಕೇವಲ ಸೇತುವೆಯಾಗಿ ಕಾರ್ಯ ನಿರ್ವಹಿಸಿದ್ದೇನೆ, ಮತ್ತೂರು ಗ್ರಾಮವು ನಮ್ಮ ದೇಶದ ಆಸ್ತಿ : ಬಿ. ವೈ. ರಾಘವೇಂದ್ರ

ಶಿವಮೊಗ್ಗ : ನಮ್ಮ ದೇಶದ ಅನೇಕ ಹಿರಿಯರು, ಪಕ್ಷದ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥರು ಮತ್ತೂರಿಗೆ ಬಂದು ಉಳಿದಿದ್ದಾರೆ, ಸಂಸ್ಕೃತಿ ಮತ್ತು ಸಂಸ್ಕೃತವನ್ನು ಉಳಿಸಿದ ಕೀರ್ತಿ ಇಲ್ಲಿನ ಹಿರಿಯರಿಗೆ ಸಲ್ಲುತ್ತದೆ, ಮತ್ತೂರು ಗ್ರಾಮ ನಮ್ಮ ದೇಶದ ಆಸ್ತಿ, ತುಂಗಾ ನದಿಯ ದಂಡೆಗಳು ಮಳೆಗಾಲದಲ್ಲಿ ಹೆಚ್ಚು ಹಾನಿಗೆ ಒಳಗಾಗಿತ್ತು ಈ ಕಾರಣದಿಂದ ಇಂದು ತಡೆ ಗೋಡೆ ನಿರ್ಮಿಸುವ ಕೆಲಸಕ್ಕೆ ಚಾಲನೆ ದೊರೆಯುತ್ತಿದೆ ಆದಷ್ಟು ಶೀಘ್ರವಾಗಿ ಕಾಮಗಾರಿ ಮುಗಿದು ಇಲ್ಲಿನ ಜನತೆಗೆ ಉಪಯೋಗವಾಗಲಿ ನಾನು ಇಲ್ಲಿ ಕೇವಲ ಸೇತುವೆಯಾಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ಸಂಸದರಾದ ಬಿ. ವೈ. ರಾಘವೇಂದ್ರ ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ಸಂಸ್ಕೃತ ಗ್ರಾಮ ಮತ್ತೂರಿನಲ್ಲಿ ತುಂಗಾನದಿಗೆ ತಡೆಗೋಡೆ ನಿರ್ಮಾಣ ಕಾರ್ಯದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತುಂಗಾ ನದಿಗೆ ಪೂಜೆಯನ್ನು ಸಲ್ಲಿಸಿ ಬಾಗಿನವನ್ನು ಅರ್ಪಿಸಿದರು.
ನಂತರ ಮಾತನಾಡಿದರು.

ರಾಷ್ಟೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿ ರಾಮ್ ಅವರು, ಕುಮುದ್ವತಿ ಸಂಸ್ಥೆಯ ಮುಖ್ಯಸ್ಥರಾದ ತೇಜಸ್ವಿನಿ ರಾಘವೇಂದ್ರ ಅವರು.
ಭಾನುಪ್ರಕಾಶ್, ಹೇಮಾವತಿ ಶಿವನಂಜಪ್ಪ,ಮಹೇಶ್. ಶಿವನಂಜಪ್ಪ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ಹರಿಕೃಷ್ಣ, ವೇದ ಬ್ರಹ್ಮ ಕೇಶವ ಅವಧಾನಿಗಳು ಮತ್ತಿತರರು ಉಪಸ್ಥಿತರಿದ್ದರು

ಇದನ್ನು ಒದಿ : https://cnewstv.in/?p=7963

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*