Cnewstv.in / 27.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಈ ಸರ್ಕಲ್ ಗೆ ಕಾಲಿಟ್ಟರೆ ಸಾವು ಗ್ಯಾರೆಂಟಿ ನಾ !!
ಶಿವಮೊಗ್ಗ : ನಗರ ಬೆಳಿಯುತ್ತಿದೆ ಸ್ಮಾರ್ಟ್ ಸಿಟಿ ಆಗಿದೆ. ಶಿವಮೊಗ್ಗದ ಹೊರವಲಯಗಳು ಕೂಡ ಇದೀಗ ನಗರದ ಹೃದಯ ಭಾಗ ಎನ್ನುವಷ್ಟರ ಮಟ್ಟಿಗೆ ಡೆವಲಪ್ ಆಗಿದೆ. ಆದರೆ ನಗರದ ಈ ಕೆಲವು ಸರ್ಕಲ್ ಗಳಿಗೆ ಕಾಲಿಟ್ಟರೆ ಸಾವು ಗ್ಯಾರಂಟಿ ನಾನು ಅನುಮಾನ ವ್ಯಕ್ತವಾಗ್ತದೆ.
ನಗರದ ಹೊರ ವಲಯ ಎಂದೇ ಕರೆಯಲಾಗುತ್ತಿದ್ದ ಅಲ್ಕೊಳ ಸರ್ಕಲ್ ಇದೀಗ ಶಿವಮೊಗ್ಗದ ಆಕ್ಸಿಡೆಂಟ್ ಪಾಯಿಂಟ್ ಆಗಿದೆ. ಸಾಗರ ಮುಖ್ಯರಸ್ತೆ, ವಿಶಾಲ್ ಮಾರ್ಟ್, ದೇವಸ್ಥಾನ, ಶಾಲೆ, ಎಪಿಎಂಸಿ ಮಾರುಕಟ್ಟೆ ಗೋಪಾಲ ಗೌಡ ಬಡಾವಣೆ, ವಿನೋಬನಗರ ಕ್ಕೆ ಹೋಗುವ ಸೆಂಟರ್ ಪಾಯಿಂಟ್ ಆಗಿದೆ. ಅದರೆ ಈ ಸರ್ಕಲ್ ವಾಹನ ದಟ್ಟಣೆಯಿಂದ ಸಿಗ್ನಲ್ ಇಲ್ಲದೆ ಆಕ್ಸಿಡೆಂಟ್ ಪಾಯಿಂಟ್ ಆಗಿದೆ.
ಪ್ರತಿದಿನ ಈ ಸರ್ಕಲ್ ನಲ್ಲಿ ಒಂದಿಲ್ಲೊಂದು ಅಪಘಾತಗಳು ನಡೆಯುತ್ತಲೇ ಇರುತ್ತದೆ. ಸಾಗರ ಮುಖ್ಯರಸ್ತೆ ಆಗಿರುವುದರಿಂದ ಬಸ್ಸುಗಳು, ಕಾರುಗಳು ವೇಗವಾಗಿಯೇ ಸಂಚರಿಸುತ್ತವೆ. ಮತ್ತೊಂದೆಡೆ ಯುವಕರು ಈ ರಸ್ತೆಯಲ್ಲಿ ವೀಲಿಂಗ್ ಮಾಡುವುದು ಉಂಟು.
ಹತ್ತಿರದಲ್ಲಿಯೇ ವಿಶಾಲ್ ಮಾರ್ಟ್, ಮೋರ್ ಸೂಪರ್ ರ್ಮಾರ್ಕೆಟ್ ಇರೋದರಿಂದ ಶಾಪಿಂಗ್ ಬರುವವರ ಸಂಖ್ಯೆಯೂ ಹೆಚ್ಚು. ಸಂಜೆ ಸಮಯದಲ್ಲಿ ಇಲ್ಲಿ ಹೆಚ್ಚು ತಿಂಡಿ ಗಾಡಿಗಳನ್ನ ಹಾಕುವುದರಿಂದ ತಿಂಡಿ ಸವಿಯಲು ಬರುವವರ ಸಂಖ್ಯೆ ಹೆಚ್ಚಾಗಿದ್ದು ದುಪ್ಪಟ್ಟು ವಾಹನಗಳು ಸಂಚರಿಸುತ್ತದೆ.
ಸದಾ ಜನದಟ್ಟಣೆ ಇರುವ ಈ ಸರ್ಕಲ್ ಕ್ಕೆ ಸಿಗ್ನಲ್ ನ ಅವಶ್ಯಕತೆ ಇದೆ. ಸುತ್ತಮುತ್ತಲಿನ ಬಡಾವಣೆಯ ನಿವಾಸಿಗಳು ಸಹ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ವಿಷಯವನ್ನ ತಿಳಿಸಿದ್ದಾರೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇನ್ನಷ್ಟು ಅಪಾಯಗಳು ಸಂಭವಿಸುವ ಮುನ್ನ ಇಲ್ಲಿ ಸಿಗ್ನಲ್ ಹಾಕುವುದು ಉತ್ತಮ ಎನ್ನುವುದು ಜನರ ಅಭಿಪ್ರಾಯ.
ಇದನ್ನು ಒದಿ : https://cnewstv.in/?p=7957
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv