Cnewstv.in / 25.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಡಿವೈಡರ್ ಗಂಡಾಂತರ…ವಾಹನ ಸವಾರರೇ ಎಚ್ಚರ!!!
ಶಿವಮೊಗ್ಗ : ನಗರದಲ್ಲಿ ವಾಹನ ಸವಾರರು ಇತ್ತೀಚಿನ ದಿನಗಳಲ್ಲಿ ಓಡಾಡುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸವಳಂಗ ರಸ್ತೆಯಲ್ಲಿನ ಡಿವೈಡರ್ ಗಳು ಜನರಿಗೆ ಗಂಡಾಂತರವನ್ನು ತಂದೊಡ್ಡುತ್ತಿದೆ
ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಡಿವೈಡರ್ ಗೆ ಹಾಕಲಾದ ಕಬ್ಬಿಣದ ಸರಳುಗಳು ನಿರ್ವಹಣೆಯ ಕೊರತೆಯಿಂದಾಗಿ ಕುಸಿದು ರಸ್ತೆಯ ಮೇಲೆ ಬಿದ್ದಿದೆ.
ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದ ಡಿವೈಡರ್ ಗೆ ಬೈಕ್ ಡಿಕ್ಕಿಯಾದ ಪರಿಣಾಮ ಸವಾರ ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ. ಬೈಕ್ ಸವಾರ ನಾಗರಾಜ್ ಅವರ ಕಾಲು ಮತ್ತು ತೊಡೆಗೆ ಗಂಭೀರ ಗಾಯವಾಗಿದೆ. ಹಿಂಬದಿ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಜಿಲ್ಲಾಧಿಕಾರಿಯ ಕಚೇರಿಗೆ ಅನೇಕ ಮಂದಿ ಬರುತ್ತಾರೆ. ಶಾಲಾ-ಕಾಲೇಜು ವಲಯ ಆಗಿರೋದರಿಂದ ವಿದ್ಯಾರ್ಥಿಗಳು ಸಹ ಸಂಚರಿಸುತ್ತಿರುತ್ತಾರೆ. ಇಂತಹ ಪ್ರಮುಖ ರಸ್ತೆಯಲ್ಲಿರುವ ಡಿವೈಡರ್ ವಾಹನ ಸವಾರರ ಪ್ರಾಣಕ್ಕೆ ಕುತ್ತು ತರುತ್ತಿದೆ.
ಸವಳಂಗ ರಸ್ತೆಯ ಜೆಪಿ ಆಸ್ಪತ್ರೆ ಮುಂಭಾಗದ ಡಿವೈಡರ್ ಮೇಲಿನ ಕಂಬಕ್ಕೆ ಹಾಕಲಾದ ಜಾಹೀರಾತಿನ ಫಲಕದ ಕಬ್ಬಿಣದ ಫ್ರೇಂ ಗಳು ರಸ್ತೆಗೆ ಬಾಗಿ ನೇತಾಡುತ್ತಿದೆ.
ಈಗಾಗಲೇ ಸವಳಂಗ ರಸ್ತೆಯ ಈ ಭಾಗದಲ್ಲಿ ಅನೇಕ ಅಪಘಾತಗಳು ಸಂಭವಿಸಿದೆ ಆದರೂ ಸಹ ಅಧಿಕಾರಿಗಳು ಯಾವ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಬೇಕಾಗಿದೆ.
ಇದನ್ನು ಒದಿ : https://cnewstv.in/?p=7913
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv