Cnewstv.in / 25.01.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಕೊರೊನಾ.. ಸಾಮಾನ್ಯ ಕಾಯಿಲೆ..
ನವದೆಹಲಿ : ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಕೊರೊನಾ ಮಹಾಮಾರಿ ಇದೀಗ ಸಾಮಾನ್ಯ ಕಾಯಿಲೆಯಂತೆ ಅಗಿದೆ. ಮೊದಲನೇ ಮತ್ತು ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯಲ್ಲಿ ಕೊರೊನಾ ತೀವ್ರತೆ ಕಡಿಮೆಯಾಗಿದೆ.
ಹೌದು ಇದೆ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಾಹಿತಿಯೊಂದನ್ನು ಹೊರಹಾಕಿದ್ದು,ಈ ಮಾಹಿತಿ ಪ್ರಕಾರ ಫೆಬ್ರವರಿ 15 ರೊಳಗೆ ದೇಶದಲ್ಲಿ ಕೊರೊನಾ ಇಳಿಮುಖವಾಗಲಿದೆ. ಹಾಗೂ ಎಲ್ಲರೂ ಲಸಿಕೆ ಹಾಕಿಸಿ ಕೊಂಡಿದ್ದರಿಂದ ಕೊರೋನಾದ ತೀವ್ರತೆ ಕಡಿಮೆಯಾಗಿದೆ.
ದೇಶದಲ್ಲಿ ಈಗಾಗಲೇ ಶೇ. 100 ರಷ್ಡು ಮೊದಲ ಡೋಸ್ ಹಾಕಲಾಗಿದೆ. 18 ವರ್ಷ ಮೇಲ್ಪಟ್ಟ ಶೇ. 74 ರಷ್ಟು ಮಂದಿ ಎರಡನೇ ಡೋಸ್ ಲಸಿಕೆಯನ್ನ ಹಾಕಿಸಿಕೊಂಡಿದ್ದಾರೆ. ಹೀಗಾಗಿ ಮೂರನೇ ಹಳೆನ ಎದುರಿಸಲು ಸಹಾಯವಾಗಿದೆ.
ಮತ್ತೊಂದಡೆ ಮದ್ರಾಸ್ ಐಐಟಿ ತಜ್ಞರ ಅಧ್ಯಯನದ ಪ್ರಕಾರ ಫೆಬ್ರವರಿ ಮೊದಲನೇ ವಾರದಲ್ಲಿ ಕೊರೊನಾ ಮೂರನೇ ಅಲೆ ಅತ್ಯಂತ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಲಿದೆ. ಫೆಬ್ರವರಿ ಅಂತ್ಯದಲ್ಲಿ ಕೊರೊನಾ ಪ್ರಮಾಣದಲ್ಲಿದೆ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.
ಇದನ್ನು ಒದಿ : https://cnewstv.in/?p=7924
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv