Breaking News

ಸಿದ್ದರಾಮಯ್ಯ ಕಾಲದಲ್ಲಿ ಮನೆಗೆ ಬೀಗ ಹಾಕ್ತಾ ಇರಲಿಲ್ಲ ?? ಸಿದ್ದುಗೆ ಟಾಂಗ್ ಕೊಟ್ಟ ಕೆ ಎಸ್ ಈಶ್ವರಪ್ಪ.

Cnewstv.in / 25.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಸಿದ್ದರಾಮಯ್ಯ ಕಾಲದಲ್ಲಿ ಮನೆಗೆ ಬೀಗ ಹಾಕ್ತಾ ಇರಲಿಲ್ಲ ?? ಸಿದ್ದುಗೆ ಟಾಂಗ್ ಕೊಟ್ಟ ಕೆ ಎಸ್ ಈಶ್ವರಪ್ಪ.

ಶಿವಮೊಗ್ಗ : ರಾಜ್ಯ ಸರ್ಕಾರ ಸಾಲದಲ್ಲಿ ಮುಳುಗಿದೆ ಎಂದು ಸಿದ್ದರಾಮಯ್ಯನವರು ಹೇಳಿದ ಮಾತಿಗೆ ಕೆಎಸ್ ಈಶ್ವರಪ್ಪನವರು ಟಾಂಗ್ ನೀಡಿದ್ದಾರೆ.

ಸಿದ್ದರಾಮಯ್ಯನವರು ಸಿಎಂ ಆಗಿದ್ದ ಕಾಲದಲ್ಲಿ ವಜ್ರ ವೈಡೂರ್ಯಗಳನ್ನು ರಸ್ತೆಯಲ್ಲಿ ಮಾರಾಟ ಮಾಡ್ತಾಯಿದ್ರು. ಯಾರ ಮನೆಗೂ ಬೀಗ ಹಾಕ್ತಿರ್ಲಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ವಿಜಯನಗರ ಸಾಮ್ರಾಜ್ಯ ಆಗಿತ್ತು. ಈಗ ಮಾತ್ರ ಸರ್ಕಾರ ಸಾಲ ಮಾಡಿರೋದು ಎಂದರು.

ನಾನು ಎಲ್ ಕೆ ಜಿ ಟೀಚರ್ ಅಲ್ಲ..

LKG ಸ್ಟೂಡೆಂಟ್ ಆಗಿರೋ ಸಿದ್ದರಾಮಯ್ಯಗೆ ಪಾಠ ಮಾಡೋಕೆ ನಾನು LKG ಟೀಚರ್ ಅಲ್ಲ.. ಸರ್ಕಾರ ಅಂದ್ರೆ ಸಾಲಮಾಡುವುದು ಇರುತ್ತೆ, ಸಾಲತೀರಿಸುವುದು ಇರುತ್ತೆ, ಅರ್ಥ ಸಚಿವರಾಗಿದ್ದ ಅವರಿಗೆ ನಾನು ಹೇಳೋಕೆ ಆಗುತ್ತಾ ಅರ್ಥ ಮಾಡ್ಕೋಬೇಕು..ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಒಂದು ರೂಪಾಯಿ ಕೂಡ ಸಾಲ ಮಾಡಿಲ್ಲ ಎಂದು ಬಹಿರಂಗವಾಗಿ ಹೇಳಲಿ‌‌ ಎಂದರು.

ಸಿ.ಎಂ ಸ್ಥಾನ ಯಾಕೆ ಕಳೆದುಕೊಂಡ್ರಿ..

ನೀವು ಸಾಲ ಮಾಡದೆ ಆಡಳಿತ ನಡೆಸಿದರೆ ಯಾಕೆ ಸೋಲ ಬೇಕಾಗಿತ್ತು? ಸಿಎಂ ಸ್ಥಾನ ಯಾಕೆ ಕಳೆದುಕೊಂಡರು ಎಂದು ಪ್ರಶ್ನಿಸಿದ್ದಾರೆ.‌ ಸೋತಮೇಲೆ ಸಿದ್ದರಾಮಯ್ಯನವರು ಬಹಳ ಪಾಠ ಹೇಳೋ ಅಭ್ಯಾಸ ಕಲಿತಿದ್ದಾರೆ.‌ ರಾಜ್ಯದ ಜನ ಎಲ್ಲಾ ಪಾಠಗಳಿಗೆ ಉತ್ತರ ಕೊಡುತ್ತಿದ್ದಾರೆ. ಪಾಠ ಬಿಟ್ಟು ಸರ್ಕಾರದ ತಪ್ಪು ಬಹಿರಂಗವಾಗಿ ತಿಳಿಸಿ ಹೋರಾಟ ಮಾಡಲಿ ಒಪ್ಪಿಕೊಳ್ಳುತ್ತೇವೆ ಎಂದರು.

ಇದನ್ನು ಒದಿ : https://cnewstv.in/?p=7913

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*