Breaking News

‘ವಿ ದ ಪೀಪಲ್ ಆಫ್ ಇಂಡಿಯಾ’ ಪ್ರಥಮ ನಾಟಕ ಪ್ರದರ್ಶನ

Cnewstv.in / 25.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

‘ವಿ ದ ಪೀಪಲ್ ಆಫ್ ಇಂಡಿಯಾ’ ಪ್ರಥಮ ನಾಟಕ ಪ್ರದರ್ಶನ

ಶಿವಮೊಗ್ಗ : ಭಾರತೀಯ ಸಂವಿಧಾನವನ್ನು ಸಮಾಜದ ವಿವಿಧ ವರ್ಗಗಳಿಗೆ ಸುಲಭವಾಗಿ ಅರ್ಥೈಸಲು ಸಹಾಯವಾಗುವಂತೆ ಸಂವಿಧಾನದ “ವಿ ದ ಪೀಪಲ್ ಆಫ್ ಇಂಡಿಯಾ’ (We the people of India) ದ ಪ್ರಥಮ ಪ್ರದರ್ಶನವು ನಾಳೆ ಸಂಜೆ 6.30 ಕ್ಕೆ ಪ್ರದರ್ಶನಗೊಳ್ಳಲಿದೆ.

ಕರ್ನಾಟಕದ ಖ್ಯಾತ ನಾಟಕಕಾರ ಡಾ.ರಾಜಪ್ಪ ದಳವಾಯಿ ಇವರು ಈ ನಾಟಕವನ್ನು ರಚಿಸಿದ್ದು, ಉದಯೋನ್ಮುಖ
ರಂಗನಿರ್ದೇಶಕ ಶ್ರೀ.ಕೆ.ಪಿ.ಲಕ್ಷ್ಮಣ್ ಈ ನಾಟಕವನ್ನು ನಿರ್ದೇಶಿಸಿದ್ದಾರೆ. ಕಳೆದ ಆರು ತಿಂಗಳುಗಳಿಂದ ಈ ನಾಟಕ ರಚನೆಯ ಬಗ್ಗೆ ಅನೇಕ ನಾಟಕ ರಚನಾ ಕಮ್ಮಟಗಳು, ವಿಶೇಷ ಉಪನ್ಯಾಸ-ವಿಚಾರಸಂಕಿರಣಗಳನ್ನು ಆಯೋಜಿಸಿ ವಿಶಿಷ್ಟವಾಗಿ ಈ ನಾಟಕವನ್ನು ಕಟ್ಟಲಾಗಿದೆ. ಸಂವಿಧಾನದ
ಆಶಯಗಳು, ಮೂಲಭೂತ ಹಕ್ಕುಗಳು, ಕರ್ತವ್ಯಗಳು, ಮಹಿಳಾ ಹಕ್ಕುಗಳು, ಸಂವಿಧಾನ ಕರಡು ರಚನಾ
ಸಮಿತಿಯಲ್ಲಿನ ಚರ್ಚೆಗಳು, ಸಂವಿಧಾನದಲ್ಲಿ ಮಹಿಳೆಯರ ಆಶಯಗಳು ಇತ್ಯಾದಿ ವಿಷಯಗಳನ್ನು ಬಳಸಿ ಈ
ನಾಟಕವನ್ನು ಸಿದ್ದಪಡಿಸಲಾಗಿದೆ.

ಕರ್ನಾಟಕದ ಬೇರೆ ಬೇರೆ ಭಾಗಗಳ ಕಲಾವಿದರನ್ನು ಸಂದರ್ಶನದ ಮೂಲಕ ತಾತ್ಕಾಲಿಕವಾಗಿ ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಶಿವಮೊಗ್ಗ ರಂಗಾಯಣ ವ್ಯಾಪ್ತಿಯ ಒಂಭತ್ತು‌ ಜಿಲ್ಲೆಗಳಲ್ಲಿ ಮತ್ತು ರಾಜ್ಯದ ವಿವಿಧ ಕಡೆಗಳಲ್ಲಿ ಈ ನಾಟಕದ ಪ್ರದರ್ಶನಗಳನ್ನು ರಂಗಪಯಣದ ಮೂಲಕ ಆಯೋಜಿಸುವ ಯೋಜನೆ ಇದೆ ಎಂದು ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಶ್ರೀ. ಸಂದೇಶ್ ಜವಳಿ ಇವರು
ತಿಳಿಸಿದ್ದಾರೆ.

‘ವಿ ದ ಪೀಪಲ್ ಆಫ್ ಇಂಡಿಯಾ’ ನಾಟಕ ಪ್ರದರ್ಶನ ಪ್ರವೇಶ ಉಚಿತವಾಗಿರುತ್ತದೆ. ಕೋವಿಡ್ 19 ರ ಹಿನ್ನೆಲೆಯಲ್ಲಿ ಕೇವಲ 250 ಜನರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ. ಕೋವಿಡ್-19 ರ ಸರ್ಕಾರದ ನಿಯಾಮವಳಿಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ.
ಈ ನಾಟಕದ ಪ್ರದರ್ಶನಗಳು ದಿನಾಂಕ:27-01-2022 ಹಾಗೂ 28-01-2022 ರಂದು ಸಹ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸಂಜೆ 6.30 ಕ್ಕೆ ನಡೆಯಲಿವೆ.

ಇದನ್ನು ಒದಿ : https://cnewstv.in/?p=7911

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*