Cnewstv.in / 24.01.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು.
ಬೆಂಗಳೂರು : ಅಧಿಕಾರ ದುರ್ಬಳಕೆ ನಕಲಿ ದಾಖಲೆಗಳ ತಯಾರಿಕೆ ಆರೋಪದಡಿಯಲ್ಲಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿರುವ “ಸಾರಿಗೆ ವಿಭಾಗ” ದ ಕಾರ್ಯಪಾಲಕ ಅಭಿಯಂತರ ಮಹದೇವ್, ಗುಮಾಸ್ತರಾದ ರಮೇಶ್, ಕಂಪ್ಯೂಟರ್ ಆಪರೇಟರ್ ಆದ ಸತೀಶ್ ಮತ್ತು ಪಂಚಮುಖಿ ಟೂರ್ಸ್ & ಟ್ರಾವೆಲ್ಸ್ ಮಾಲೀಕ ಶಿವಾನಂದ, ಇವರುಗಳ ವಿರುದ್ಧ ಹಲಸೂರು ಗೇಟ್ ಪೋಲಿಸರು ಎಫ್.ಐ.ಆರ್. ದಾಖಲಿಸಿದ್ದಾರೆ.
ಅಧಿಕಾರಿಗಳು ಸೃಷ್ಟಿಸಿದ ನಕಲಿ ದಾಖಲೆಗಳ ಸಹಿತ ಎಂಎಂ ಲಾಜಿಸ್ಟಿಕ್ಸ್ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಸ್ಥೆಯ ವ್ಯವಸ್ಥಾಪಕ ವಿನಯ್ ಬಾಬು ನೀಡಿರುವ ದೂರಿನನ್ವಯ ಹಲಸೂರು ಗೇಟ್ ಪೋಲೀಸರು ಐಪಿಸಿ 1860 ( U/S 34, 120 B, 420, 465, 468, 471) ಅಡಿಯಲ್ಲಿ ವಂಚನೆ, ನಕಲಿ ದಾಖಲೆ ತಯಾರಿಕೆ, ಅಧಿಕಾರ ದುರುಪಯೋಗ ಪ್ರಕರಣಗಳನ್ನು ದಾಖಲಿಸಿದ್ದಾನೆ.
ಏನಿದು ಪ್ರಕರಣ ??
ಪಾಲಿಕೆಯ ಅಧಿಕಾರಿಗಳ ಬಳಕೆಗೆಂದು ಗುತ್ತಿಗೆ ಆಧಾರದಲ್ಲಿ ವಾಹನಗಳನ್ನು ಒದಗಿಸುತ್ತಿದ್ದ ಟ್ರಾವೆಲ್ಸ್ ಗಳ ಪೈಕಿ ಒಂದಾಗಿರುವ ಎಂಎಂ ಲಾಜಿಸ್ಟಿಕ್ಸ್ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಸ್ಥೆಯು ತನ್ನ ಚಾಲಕರು / ಸಿಬ್ಬಂದಿ ವರ್ಗದವರಿಗೆ ಪಾವತಿಸುತ್ತಿದ್ದ ಪಿಎಫ್, ಇ.ಎಸ್.ಐ. ದಾಖಲೆಗಳನ್ನು ಆ ಸಂಸ್ಥೆಯು ಪಾಲಿಕೆಗೆ ನಿಡುತ್ತಿದ್ದ ಕಡತಗಳಿಂದ ತೆಗೆದುಕೊಂಡಿದ್ದರು. ಈ ದಾಖಲುಗಳನ್ನು ನಕಲು ಮಾಡಿಕೊಂಡು ಪಂಚಮುಖಿ ಟೂರ್ಸ್ & ಟ್ರಾವೆಲ್ಸ್ ಎಂಬ ಹೆಸರಿನಲ್ಲಿ ಕಡತಗಳನ್ನು ತಯಾರು ಮಾಡಿ ಪಾಲಿಕೆಗೆ ಪ್ರತಿ ತಿಂಗಳು ಹತ್ತಾರು ಲಕ್ಷ ರೂ.ಗಳನ್ನು ವಂಚಿಸುತ್ತಿದ್ದರು.
ಇದನ್ನು ಒದಿ : https://cnewstv.in/?p=7895
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv