Breaking News

ಪ್ರಕಾಶ್ ಟ್ರಾವೆಲ್ಸ್ ಮಾಲೀಕನ ಮೃತದೇಹ ಪತ್ತೆ.

Cnewstv.in / 24.01.2022 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಪ್ರಕಾಶ್ ಟ್ರಾವೆಲ್ಸ್ ಮಾಲೀಕನ ಮೃತದೇಹ ಪತ್ತೆ.

ಶಿವಮೊಗ್ಗ : ಕಳೆದ ಎರಡು ದಿನಗಳಿಂದ ಪ್ರಕಾಶ್ ಟ್ರಾವೆಲ್ಸ್ ಮಾಲೀಕರಾದ ಪ್ರಕಾಶ್ ರವರ ಮೃತದೇಹಗಾಗಿ ಹುಡುಕಾಟ ನಡೆಸಲಾಗುತ್ತಿತ್ತು ಇಂದು ಬೆಳಿಗ್ಗೆ 8 ಗಂಟೆಗೆ ಅಗ್ನಿಶಾಮಕದಳದ ಸಿಬ್ಬಂದಿ ಗಳಿಗೆ ಅವರ ಮೃತದೇಹ ದೊರೆತಿದೆ.

ಶುಕ್ರವಾರ ಸಂಜೆಯಿಂದ ಪ್ರಕಾಶ್ ಟ್ರಾವೆಲ್ಸ್ ಮಾಲೀಕರು ನಾಪತ್ತೆಯಾಗಿದ್ದರು.‌ಅವರ ಕುಟುಂಬಸ್ಥರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಶನಿವಾರ ಬೆಳಿಗ್ಗೆ ಹೊಸನಗರದ ಪಟಗುಪ್ಪ ಸೇತುವೆ ಬಳಿ ಅವರ ಕಾರು ಮೊಬೈಲ್ ಮತ್ತು ಚಪ್ಪಲಿಗಳು ದೊರೆತಿತ್ತು ಹಾಗಾಗಿ ಶರಾವತಿ ಹಿನ್ನೀರಿನ ಭಾಗದಲ್ಲಿ ಶೋಧಕಾರ್ಯವನ್ನು ನಡೆಸಲಾಗುತ್ತಿತ್ತು.

ಇಂದು ಬೆಳಿಗ್ಗೆ ಪಟಗುಪ್ಪ ಸೇತುವೆ ಇಂದ ಸ್ವಲ್ಪ ದೂರದಲ್ಲೇ ಅವರ ಮೃತದೇಹ ಅಗ್ನಿಶಾಮಕದಳದ ಸಿಬ್ಬಂದಿಗಳಿಗೆ ದೊರೆತಿದೆ. ನೆನ್ನೆ ರಾತ್ರಿ ಗೃಹಸಚಿವರ ಜ್ಞಾನೇಂದ್ರ ಅವರು ಕೂಡ ಪ್ರಕಾಶ್ ರವರ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಅಧಿಕಾರಿಗಳಿಗೆ ತಿಳಿಸಿದರು. ಆದರೆ ಇಂದು ಬೆಳಿಗ್ಗೆ ಅವರು ಶವವಾಗಿ ದೊರೆತಿದ್ದಾರೆ.

ಇದನ್ನು ಒದಿ : https://cnewstv.in/?p=7880

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*