Cnewstv.in / 24.01.2022 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಆಟೋ ಕಾಂಪ್ಲೆಕ್ಸ್ ನಲ್ಲಿ ಅಗ್ನಿ ಅನಾಹುತ, ಹೊತ್ತಿ ಉರಿದ ಕಾರುಗಳು.
ಶಿವಮೊಗ್ಗ : ನಿನ್ನೆ ರಾತ್ರಿ ಆಟೋ ಕಾಂಪ್ಲೆಕ್ಸ್ ನಲ್ಲಿ ಅಗ್ನಿ ಅನಾಹುತದಿಂದಾಗಿ 4 ಕಾರುಗಳು, ಹೊತ್ತಿ ಉರಿದ ಘಟನೆ ನಡೆದಿದೆ.
ಆಟೋ ಕಾಂಪ್ಲೆಕ್ಸ್ ಮೊದಲನೇ ತಿರುವಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಮೂರು ಕಾರುಗಳು ಸುಟ್ಟು ಕರಕಲಾಗಿದೆ. ಒಂದು ಬಸ್ಸಿಗೆ ಭಾಗಶಃ ಹಾನಿಯಾಗಿದೆ. ನಿನ್ನೆ ಭಾನುವಾರ ಆದಕಾರಣ ಆಟೋ ಕಾಂಪ್ಲೆಕ್ಸ್ ನಲ್ಲಿ ಜನಸಂಚಾರ ವಿರಳವಾಗಿತ್ತು ಹಾಗಾಗಿ ಬೆಂಕಿ ಹತ್ತಿಕೊಂಡ ಘಟನೆ ತಿಳಿಯುವುದು ತಡವಾಗಿದೆ.

ಕಾರು ಮತ್ತು ಬಸ್ಸ್ ಗಳನ್ನು ನಿಲ್ಲಿಸಿದ್ದ ಪಕ್ಕದಲ್ಲಿಯೇ ಕಸದರಾಶಿ ಇದೆ. ಕಸದರಾಶಿಗೆ ಯಾರಾದರೂ ಬೆಂಕಿ ಹಚ್ಚಿರಬಹುದು ಅಥವಾ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಅಗ್ನಿಶಾಮಕದಳದ ಸಿಬ್ಬಂದಿಗೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸ್ವಲ್ಪ ತಡವಾಗಿದ್ದರೂ ಬಸ್ಸಿನ ಪಕ್ಕದಲ್ಲೇ ಇದ್ದ ಟ್ರಾನ್ಸ್ ಫಾರ್ಮ್ ಗೆ ಬೆಂಕಿ ತಗುಲಿ ಬಾರಿ ಅನಾಹುತವಾಗುತ್ತಿತ್ತು. ಕಾರ್ಯಾಚರಣೆಗೆ ಅಗ್ನಿಶಾಮಕ ಅಧಿಕಾರಿಗಳಾದ ಅಶೋಕ್ ಕುಮಾರ್, ಠಾಣಾಧಿಕಾರಿಗಳಾದ ಪ್ರವೀಣ್ ಮತ್ತು ಸಿಬ್ಬಂದಿಗಳು ಹಾಗೂ ಮಾಹಾನಗರಪಾಲಿಕೆ ಸದಸ್ಯರಾದ ರಾಹುಲ್ ಪಿ ಬಿದರಿಯವರು ನೆರವಾದರು.
ಇದನ್ನು ಒದಿ : https://cnewstv.in/?p=7878
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv